18 September

ಶಿಶುಗಳಿಗೆ ಫಾರ್ಮುಲಾ ಹಾಲು ಒಳ್ಳೆಯದೇ?

ನಿಮ್ಮ ಮಗುವಿಗೆ ಎದೆಹಾಲು ಅತ್ಯುತ್ತಮವಾಗಿದೆ - ಇದಕ್ಕಿಂತ ದೊಡ್ಡ ಸತ್ಯವಿಲ್ಲ. ನೀವು ಸ್ವಲ್ಪ ಹೊತ್ತಿನವರೆಗೂ ಎದೆಹಾಲು ನೀಡಿದರು ಕೂಡ ಅದು ನಿಮ್ಮ ಮಗುವಿಗೆ ಪ್ರಯೋಜನಕಾರಿಯಾಗಿದೆ. ಆದರೆ ನೀವು ಹೆಚ್ಚು ಎದೆಹಾಲು ನೀಡಿದಷ್ಟು ನಿಮ್ಮ ಮಗು ಹೆಚ್ಚು ರಕ್ಷಣೆ ಪಡೆದುಕೊಳ್ಳುತ್ತದೆ. ಮಗುವಿಗೆ ಪೌಷ್ಠಿಕಾಂಶವಾಗಿ ಎದೆಹಾಲು ಅತ್ಯಂತ ಉತ್ತಮ ಆಯ್ಕೆಯಾಗಿದೆ.

 

ಆದರೆ ನಿಮಗೆ ಹಾಲುಣಿಸುವಲ್ಲಿ ನಿಜವಾದ ತೊಂದರೆಯಿದ್ದರೆ, ನಿಮ್ಮ ಮಗುವಿಗೆ ಫಾರ್ಮುಲಾ ಹಾಲು ನೀಡಬೇಕಾಗಬಹುದು. ಅನೇಕ ಮಹಿಳೆಯರಿಗೆ, ಮಗುವಿಗೆ ಫಾರ್ಮುಲಾ ಹಾಲು ನೀಡುವ ನಿರ್ಧಾರವು ಅವರ ಜೀವನಶೈಲಿಯ ಆಯ್ಕೆಗಳು, ವೈದ್ಯಕೀಯ ಪರಿಸ್ಥಿತಿಗಳು ಅಥವಾ ಅವರ ಆರಾಮ ಮಟ್ಟವನ್ನು ಆಧರಿಸಿರಬಹುದು. ಇಂತಹ ಸಂದರ್ಭಗಳಲ್ಲಿ, ಫಾರ್ಮುಲಾ ಹಾಲು ಮಗುವಿಗೆ ಬೆಳವಣಿಗೆಗೆ ಬೇಕಾದ ಪೋಷಕ ತತ್ವಗಳನ್ನು ನೀಡುತ್ತದೆ.

 

ವಾಣಿಜ್ಯಿಕವಾಗಿ ಸಿದ್ಧಪಡಿಸಿದ ಫಾರ್ಮುಲಾ ಹಾಲು ಎದೆಹಾಲಿನ ಬದಲಿನ ಒಂದು ಆಯ್ಕೆಯಾಗಿದೆ ಮತ್ತು ಇದು ಹೆಚ್ಚುವರಿ ಜೀವಸತ್ವಗಳೊಂದಿಗೆ ಎದೆಹಾಲಿಗೆ ಹೋಲುವ ಎಲ್ಲಾ ಪೋಷಕಾಂಶಗಳನ್ನು ಹೊಂದಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಫಾರ್ಮುಲಾ ಹಾಲು ಸಾಮಾನ್ಯವಾಗಿ ಕ್ರಿಮಿನಾಶಕ ಸ್ಥಿತಿಯಡಿಯಲ್ಲಿ ತಯಾರಿಸಲಾಗುತ್ತದೆ ಮತ್ತು ಸರಿಯಾದ ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನೊಂದಿಗೆ ಎದೆಹಾಲಿನಂತೆಯೇ ತಯಾರಿಸಲಾಗುತ್ತದೆ.

 

ಫಾರ್ಮುಲಾ ಫೀಡಿಂಗ್ ನ ಪ್ರಯೋಜನಗಳು:

ಫಾರ್ಮುಲಾ ಆಹಾರವು ಅನುಕೂಲಕರವಾಗಿದೆ ಮತ್ತು ಮಗುವಿನ ತಂದೆ, ತಾಯಿ ಮತ್ತು ಕುಟುಂಬದಲ್ಲಿನ ಇತರೆ ಸದಸ್ಯರು ಕೂಡ ಮಗುವಿಗೆ ಹಾಲುಣಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಬಹುದಾಗಿದೆ. ಬಾಟಲಿಯನ್ನು ಕ್ರಿಮಿನಾಶಗೊಳಿಸಿದ ನಂತರ, ಪೋಷಕರು ಫಾರ್ಮುಲಾ ಹಾಲನ್ನು ಸಿದ್ಧಪಡಿಸಿ ಮಗುವಿಗೆ ನೀಡಬಹುದು. ಪ್ರಯಾಣದ ಸಮಯದಲ್ಲಿ ಮಗುವಿಗೆ ಫಾರ್ಮುಲಾ ಹಾಲನ್ನು ನೀಡುವುದು ತುಂಬಾ ಸುಲಭವಾಗಿದೆ ಮತ್ತು ತಾಯಿಗೆ ಯಾವಾಗಲು ಮಗುವಿನ ಹತ್ತಿರ ಇರುವ ಅವಶ್ಯಕತೆ ಇರುವುದಿಲ್ಲ.

 

ಫಾರ್ಮುಲಾ ಫೀಡಿಂಗ್ ನ ಹಾನಿಗಳು:

- ಫಾರ್ಮುಲಾ ಹಾಲು ಪುಡಿಯು ದುಬಾರಿಯಾಗಿದೆ.

- ಫಾರ್ಮುಲಾ ತಯಾರಿಕೆಯಲ್ಲಿ ಬಳಸಲಾಗುವ ನೀರನ್ನು ಸಹ ಕ್ರಿಮಿಶುದ್ಧೀಕರಿಸಬೇಕು.

- ಫಾರ್ಮುಲಾ ಹಾಲು ಜೀರ್ಣವಾಗಲು ಎದೆಹಾಲಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಹೀಗಾಗಿ ಫಾರ್ಮುಲಾ ಹಾಲು ಕುಡಿಯುತ್ತಿರುವ ಮಕ್ಕಳು ಸಾಮಾನ್ಯವಾಗಿ ಎದೆಹಾಲು ಕುಡಿಯುವ ಮಕ್ಕಳಕ್ಕಿಂತ ಕಡಿಮೆ ಆಹಾರ ತಿನ್ನಬೇಕು.

- ಫಾರ್ಮುಲಾ ಹಾಲು ಭವಿಷ್ಯದ ಬಳಕೆಗಾಗಿ ತಯಾರಿಸುವಲಾಗುವದಿಲ್ಲ ಮತ್ತು ಇದನ್ನು ತುಂಬಾ ಸಮಯದವರೆಗೂ ಇರಿಸಲಾಗುವುದಿಲ್ಲ.

- ಎದೆಹಾಲಿನಲ್ಲಿರುವ ಪ್ರತಿಕಾಯ ಫಾರ್ಮುಲಾ ಹಾಲಿನಲ್ಲಿ ಇಲ್ಲದಿರುವುದರಿಂದ ಫಾರ್ಮುಲಾ ಹಾಲು ಪೋಷಿತ ಮಕ್ಕಳು ಎದೆಹಾಲು ಪೋಷಿತ ಮಕ್ಕಳಿಗೆ ಹೋಲಿಸಿದರೆ ಹೆಚ್ಚು ಸೋಂಕಿಗೆ ಒಳಗಾಗುತ್ತಾರೆ.

- ಎದೆಹಾಲು - ಇದು ಯಾವಾಗಲೂ ಮಗುವಿಗೆ ಲಭ್ಯವಾಗಿದ್ದು, ಅನಿಯಮಿತವಾಗಿರುತ್ತದೆ, ಮತ್ತು ಸರಿಯಾದ ಉಷ್ಣಾಂಶ ಹೊಂದಿರುತ್ತದೆ, ಆದರೆ ನಿಮ್ಮ ಮಗುವಿಗೆ ಫಾರ್ಮುಲಾ ಹಾಲು ನೀಡಲು ನಿಮಗೆ ಒಂದು ಸುಸಜ್ಜಿತ ಯೋಜನೆಯ ಅಗತ್ಯವಿರುತ್ತದೆ.

- ನಿಮಗೆ ಮತ್ತು ನಿಮ್ಮ ಮಗುವಿಗೆ ಸೂಕ್ತವಾದದ್ದು ಏನು ಎಂಬುದು ನಿಮಗೆ ತಿಳಿದಿರಬೇಕು. ಕನಿಷ್ಠ ಒಂದು ವರ್ಷದವರೆಗೆ ಮಗುವಿಗೆ ಎದೆಹಾಲು ನೀಡುವದರಿಂದ ಮಗುವಿನ ಬೆಳವಣಿಗೆಯ ಮೇಲೆ ಉತ್ತಮ ಪ್ರಭಾವ ಬೀರುತ್ತದೆ. ಎದೆಹಾಲು ಮಗುವಿಗೆ ಒಂದು ಉತ್ತಮ ಆರೋಗ್ಯ ವಿಮೆಯಂತಿದೆ.

Last modified on Tuesday, 18 September 2018 11:48
Venkatesh Rathod

Venkat handles content management for MedHealthTV.

Leave a comment

Make sure you enter all the required information, indicated by an asterisk (*). HTML code is not allowed.

Ticket

Support info@medhealthtv.com

Contact Us Form

Contact Us
security image
Live Chat

Live ChatInstant Reply