ರಕ್ತನಾಳಗಳ ಕುಗ್ಗುವಿಕೆಯಿಂದ ಭ್ರೂಣಕ್ಕೆ ಕಡಿಮೆ ಆಮ್ಲಜನಕ ಮತ್ತು ಪೋಷಕಾಂಶಗಳ ಪೂರೈಕೆ ಉಂಟಾಗುತ್ತದೆ. ಇದರ ಪ್ರತಿಯಾಗಿ, ಮಗುವಿನ ಬೆಳವಣಿಗೆಯಲ್ಲಿ ಕುಂಠಿತವನ್ನು ಉಂಟುಮಾಡುತ್ತದೆ. ನಿಕೋಟಿನ್ ಭ್ರೂಣದ ಮೆದುಳು ಮತ್ತು ಶ್ವಾಸಕೋಶಗಳನ್ನು ಕೂಡ ಹಾನಿಗೊಳಿಸುತ್ತದೆ. ಈ ಹಾನಿ ಶಾಶ್ವತವಾಗಿರುತ್ತದೆ.
ಗರ್ಭಧಾರಣೆಯ ಸಮಯದಲ್ಲಿ ಧೂಮಪಾನ ಮಾಡುವುದರಿಂದ ಪ್ರಸವಪೂರ್ವ ಜನನ ಅಂದರೆ ಶಿಶುವಿನ ಜನನ ಗರ್ಭಧಾರಣೆಯ 37 ವಾರಗಳ ಮುಂಚೆಯೇ ಸಂಭವಿಸುವ ಸಾಧ್ಯತೆಗಳು ಹೆಚ್ಚುತ್ತ್ತವೆ. ಪ್ರಸವ-ಪೂರ್ವ ಶಿಶುಗಳು ಸಂಪೂರ್ಣವಾಗಿ ಅಭಿವೃದ್ಧಿಯಾಗುವ ಅವಕಾಶಗಳು ತುಂಬಾ ಕಡಿಮೆಯಾಗಿದೆ. ದೂಮಪಾನ ಮಾಡದೆ ಇರುವ ತಾಯಿಯಂದರಿಗೆ ಜನಿಸಿದ ಶಿಶುಗಳಿಗಿಂತ ಅವು ಗಾತ್ರದಲ್ಲಿ ಚಿಕ್ಕದಾಗಬಹುದು, ಮತ್ತು ಅವುಗಳು ಕೊಲಿಕ್ (ಶಿಶುಗಳು ಅನಿಯಂತ್ರಿತವಾಗಿ ಅಳುವುದು) ಹೊಂದಿರುವ ಸಾಧ್ಯತೆಯಿದೆ. ಈ ಮಕ್ಕಳು ತಮ್ಮ ಬಾಲ್ಯದಲ್ಲಿಯೆ ಆಸ್ತಮಾ ಮತ್ತು ಸ್ಥೂಲಕಾಯವನ್ನು ಬೆಳೆಸಿಕೊಳ್ಳುವ ಸಾಧ್ಯತೆಯಿದೆ.
ಸೆಕೆಂಡ್-ಹ್ಯಾಂಡ್ ಸ್ಮೋಕ್ (ಧೂಮಪಾನ ಮಾಡುವ ಜನರಿಂದ ಬರುವ ಹೋಗೆ ಮತ್ತು ವಾಹನ ಮಾಲಿನ್ಯದ ಹೊಗೆಯನ್ನು ಉಸಿರಾಡುವುದು) ಕಡಿಮೆ ತೂಕದ ಶಿಶುಗಳ ಜನ್ಮದ ಪ್ರಮಾಣದಲ್ಲಿ 20% ನಷ್ಟು ಅಪಾಯವನ್ನು ಹೆಚ್ಚಿಸುವ ಸಾಧ್ಯತೆಗಳು ಇದೆ. ಸೆಕೆಂಡ್-ಹ್ಯಾಂಡ್ ಸ್ಮೋಕ್ ನ ಸಂಪರ್ಕದಲ್ಲಿ ಬರುವ ಶಿಶುಗಳಿಗೆ ಆಸ್ತಮಾ ಮತ್ತು ಕಿವಿ ಸೋಂಕುಗಳು ಸಂಭವಿಸಬಹುದು.
ನಿಮ್ಮ ಮಗುವಿನ ಆರೋಗ್ಯಕ್ಕಾಗಿ ನಿಮ್ಮ ಗರ್ಭಾವಸ್ಥೆಯಲ್ಲಿ ಧೂಮಪಾನವನ್ನು ತಪ್ಪಿಸಿ ಮತ್ತು ಧೂಮಪಾನ ಮಾಡುವ ಜನರಿಂದ ದೂರವಿರಿ