ರುಬೆಲ್ಲಾ ಅಲ್ಲದೆ, ಝಿಕಾದಂತಹ ಇತರ ವೈರಸ್ಗಳು ಮಗುವಿನಲ್ಲಿ ಕೆಲವು ದೋಷಗಳನ್ನು ಉಂಟುಮಾಡಬಹುದು.
ಗರ್ಭಾವಸ್ಥೆಯಲ್ಲಿ ಚಿಕನ್ ಪಾಕ್ಸ್ (ಸಿಡುಬು) ಸೋಂಕು ಕೂಡ ಅಪಾಯಕಾರಿ. ಹೆಚ್ಚಿನ ಮಕ್ಕಳು ಈ ವೈರಸ್ ಗೆ ಪ್ರತಿರೋಧಕರಾಗಿದ್ದಾರೆ, ಏಕೆಂದರೆ ಅವರು ಮಕ್ಕಳಾಗಿದ್ದಾಗಲೇ ಈ ವೈರಸ್ ನಿಂದ ಆಕ್ರಮಣಕ್ಕೆ ಒಳಗಾಗಿರುತ್ತಾರೆ, ಆದರೆ ನೀವು ಮೊದಲು ಸೋಂಕನ್ನು ಹೊಂದಿಲ್ಲದಿದ್ದರೆ ಮತ್ತು ನೀವು ಗರ್ಭಿಣಿಯಾಗಿದ್ದಾಗ ನಿಮ್ಮ ಕುಟುಂಬದಲ್ಲಿ ಯಾರಾದರೂ ಚಿಕನ್ ಪಾಕ್ಸ್ ಹೊಂದಿದ್ದರೆ, ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ನೀವು ಸೋಂಕಿಗೆ ಪ್ರತಿರಕ್ಷಣೆ ಹೊಂದಿದ್ದಿರೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ವೈದ್ಯರು ರಕ್ತ ಪರೀಕ್ಷೆಯನ್ನು ಮಾಡಬಹುದು. CMV (Cytomegalovirus) ಸೋಂಕು ಗರ್ಭಧಾರಣೆಯ ಸಮಯದಲ್ಲಿ ಅಪಾಯಕಾರಿಯಾಗಬಹುದು, ಏಕೆಂದರೆ ಇದು ಕಿವುಡುತನ, ದೃಷ್ಟಿ ದೋಷ, ಕಲಿಕೆಯ ತೊಂದರೆಗಳು ಮತ್ತು ಅಪಸ್ಮಾರ ಕಾಯಿಲೆಗಳಂತಹ ತೊಂದರೆಗಳನ್ನು ಶಿಶುಗಳಲ್ಲಿ ಉಂಟುಮಾಡಬಹುದು.
ಬೆಕ್ಕಿನ ಮಲದಲ್ಲಿ ಟಕ್ಸೊಪ್ಲಾಸ್ಮಾ (toxoplasma) ಇರಬಹುದು - ಇದು ಟಾಕ್ಸೊಪ್ಲಾಸ್ಮಾಸಿಸ್ ಗೆ (Toxoplasmosis) ಕಾರಣವಾಗುವ ಒಂದು ಜೀವಿ.
ಹೆಪಟೈಟಿಸ್ ಬಿ ಎನ್ನುವುದು ಪಿತ್ತಜನಕಾಂಗವನ್ನು ಸೋಂಕಿಸುವ ವೈರಸ್. ಹೆಪಟೈಟಿಸ್ B ಯೊಂದಿಗಿನ ಅನೇಕ ಜನರು ಅನಾರೋಗ್ಯದ ಯಾವುದೇ ಸಂಕೇತವನ್ನು ತೋರಿಸುವುದಿಲ್ಲ, ಆದರೆ ಅವರು ಇತರರಿಗೆ ಸೋಂಕು ಹರಡಬಹುದು. ಸೋಂಕಿತ ವ್ಯಕ್ತಿಯೊಂದಿಗೆ ಯಾವುದೇ ರಕ್ಷಣೆ ಇಲ್ಲದೆ (ಕಾಂಡೊಮ್ ಬಳಸದೆ) ಸಂಭೋಗ ಕ್ರಿಯೆ ನಡೆಸಿದ್ದಲ್ಲಿ, ಅಥವಾ ಸೋಂಕಿತ ವ್ಯಕ್ತಿಯ ರಕ್ತದೊಂದಿಗೆ ಸಂಪರ್ಕದಲ್ಲಿ ಬಂದಾಗ ಈ ವೈರಸ್ ಹರಡುತ್ತದೆ. ನೀವು ಹೆಪಟೈಟಿಸ್ ಬಿ ಹೊಂದಿದ್ದರೆ ಅಥವಾ ಗರ್ಭಾವಸ್ಥೆಯಲ್ಲಿ ಸೋಂಕಿಗೆ ಒಳಗಾಗಿದ್ದರೆ, ಜನನದ ಸಮಯದಲ್ಲಿ ನಿಮ್ಮ ಮಗುವಿಗೆ ನೀವು ಈ ಸೋಂಕನ್ನು ಹರಡುತ್ತೀರಾ.
ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಹೆಪಟೈಟಿಸ್ B ಯ ರಕ್ತ ಪರೀಕ್ಷೆ ತಮ್ಮ ಪ್ರಸವದ ಆರೈಕೆಯ ಭಾಗವಾಗಿ ಮಾಡಲಾಗುತ್ತದೆ. ಅಪಾಯದಲ್ಲಿರುವ ಶಿಶುಗಳಿಗೆ ಜನ್ಮದಲ್ಲಿ ಹೆಪಟೈಟಿಸ್ ಬಿ ಲಸಿಕೆ ನೀಡಬೇಕು. ಭವಿಷ್ಯದಲ್ಲಿ ಸೋಂಕಿನಿಂದ ಮತ್ತು ಗಂಭೀರ ಪಿತ್ತಜನಕಾಂಗದ ಕಾಯಿಲೆಯ ವಿರುದ್ಧ ಹೋರಾಡಲು ಈ ಲಸಿಕೆ ಬಹಳ ಉಪಕಾರಿಯಾಗಿದೆ.