ಹೀಗಾಗಿ ಗರ್ಭಧಾರಣೆಯ ಸ್ಥಳ ಬಹಳ ಮುಖ್ಯವಾಗಿದೆ. ಗರ್ಭಾವಸ್ಥೆಯ ವಯಸ್ಸು crown-rump ಉದ್ದವನ್ನು (CRL) ಅಳೆಯುವ ಮೂಲಕ ಕಂಡುಹಿಡಿಯಲಾಗುತ್ತದೆ. ಇದು ಮಗುವಿನ ತಲೆಯ ಮೇಲ್ಭಾಗದ ಮತ್ತು ಸ್ಯಾಕ್ರಮ್ನ (Sacrum) (ಬೆನ್ನಿನ ಕೆಳಭಾಗದಲ್ಲಿರುವ ತ್ರಿಕೋನ ಮೂಳೆ ಬೆಸೆಯುವ ಬೆನ್ನುಮೂಳೆಯಿಂದ ಉಂಟಾಗುತ್ತದೆ ಮತ್ತು ಸೊಂಟದ ಎರಡು ಹಿಪ್ ಮೂಳೆಗಳ ನಡುವೆ ನೆಲೆಗೊಂಡಿದೆ) ಕೆಳ ತುದಿಯನಡುವಿನ ಅಂತರವಾಗಿದೆ. ಗರ್ಭಾವಸ್ಥೆಯ ವಯಸ್ಸಿನ 6 ರಿಂದ 11 ವಾರಗಳವರೆಗೆ, ಭ್ರೂಣದ CRL ಪ್ರತಿ ದಿನ ಸುಮಾರು 1 mm ನಷ್ಟು ಪ್ರಮಾಣದಲ್ಲಿ ಬೆಳೆಯುತ್ತದೆ. ಆದ್ದರಿಂದ ಸಾಮಾನ್ಯವಾಗಿ ಗರ್ಭಾವಸ್ಥೆಯ ವಯಸ್ಸನ್ನು CRL ಅನ್ನು 6 ವಾರಗಳ ಮೂಲ ವಯಸ್ಸಿನಲ್ಲಿ ಸೇರಿಸುವ ಮೂಲಕ ಲೆಕ್ಕಹಾಕಲಾಗುತ್ತದೆ. ಉದಾಹರಣೆಗೆ - CRL 25 mm ಆಗಿದ್ದರೆ ಗರ್ಭಾವಸ್ಥೆಯ ವಯಸ್ಸು 9 ವಾರ 4 ದಿನಗಳು (6 ವಾರಗಳು + 25 (3 ವಾರಗಳು (21 ದಿನಗಳು) +4). 12 ವಾರಗಳ ನಂತರ ದ್ವಿಧ್ರುವಿ ವ್ಯಾಸವನ್ನು ಗರ್ಭಾವಸ್ಥೆಯ ವಯಸ್ಸನ್ನು (ಭ್ರೂಣದ ತಲೆಯ ಅಗಲವನ್ನು ಅಳೆಯಲು) ಅಳೆಯಲು ಬಳಸಲಾಗುತ್ತದೆ.
ನ್ಯೂಕಲ್ ಸ್ಕ್ಯಾನ್ ಅನ್ನು ಕೆಲವೊಮ್ಮೆ 11 ರಿಂದ 13 ವಾರ+5 ದಿನಗಳ ಗರ್ಭಾವಸ್ಥೆಯಲ್ಲಿ ಮಾಡಲಾಗುತ್ತದೆ. ಡೌನ್ಸ್ ಸಿಂಡ್ರೋಮ್ ನ ಲಕ್ಷಣಗಳನ್ನು ಪರಿಶೀಲಿಸಲು ಈ ಪರೀಕ್ಷೆಯನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ. ಭ್ರೂಣದ ಕುತ್ತಿಗೆಯ ಪ್ರದೇಶದಲ್ಲಿ ಭ್ರೂಣದ ಚರ್ಮದ ಕೆಳಗೆ ದ್ರವದ ಸಂಗ್ರಹವನ್ನು ನ್ಯೂಕಲ್ ಟ್ರಾನ್ಸ್ಲ್ಯೂಎನ್ಸಿ (Nuchal Translucency) ಎಂದು ಕರೆಯಲಾಗುತ್ತದೆ. ಆರಂಭಿಕ ಗರ್ಭಾವಸ್ಥೆಯಲ್ಲಿ ಇದು ಎಲ್ಲಾ ಭ್ರೂಣಗಳಲ್ಲಿ ಕಂಡುಬರುತ್ತದೆ. ಆದರೆ ಈ ಪ್ರದೇಶದಲ್ಲಿ ದ್ರವದ ಹೆಚ್ಚಿನ ಸಂಗ್ರಹವು ಡೌನ್ ಸಿಂಡ್ರೋಮ್ ಅಥವಾ ಇತರ ಕ್ರೋಮೋಸೋಮಲ್ ಅಸಹಜತೆಗಳ ಸೂಚನೆಯಾಗಿರಬಹುದು. ಇದು ಭ್ರೂಣದ ಚರ್ಮದ ಕೆಳಗೆ ಕಪ್ಪು ಜಾಗವಾಗಿ ಅಲ್ಟ್ರಾಸೌಂಡ್ನಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಟ್ರಾಸೌಂಡ್ ಸ್ಕ್ಯಾನ್ ಸಮಯದಲ್ಲಿ ಕಪ್ಪು ಜಾಗವನ್ನು ಅಳೆಯಲಾಗುತ್ತದೆ. ಇದು ಸಾಮಾನ್ಯವಾಗಿ 2.5 ಮಿಮಿಗಿಂತ ಕಡಿಮೆಯಿರುತ್ತದೆ ಮತ್ತು ಹೆಚ್ಚಾಗಿ (2.5 ಮಿಮೀಗಿಂತಲೂ ಹೆಚ್ಚಿನ) ಕಂಡುಬಂದಾಗ ಮಗುವಿನಲ್ಲಿ ಡೌನ್ ಸಿಂಡ್ರೋಮ್ ಅಥವಾ ಇನ್ನೊಂದು ವರ್ಣತಂತು ಅಸಹಜತೆಯನ್ನು ಸೂಚಿಸಬಹುದು. ಪ್ರಸಕ್ತ, ಗರ್ಭಾವಸ್ಥೆಯಲ್ಲಿ ಡೌನ್ ಸಿಂಡ್ರೋಮ್ ಪತ್ತೆಹಚ್ಚಲು ಇದು ಅತ್ಯಂತ ನಿಖರವಾದ ಯಾವುದೇ ಶಸ್ತ್ರಗಳನ್ನು ಬಳಸದೆ ಮಾಡುವ ಪರೀಕ್ಷೆಯಾಗಿದೆ. ಅವರು ನ್ಯೂಕಲ್ ಸ್ಕ್ಯಾನ್ ಸಮಯದಲ್ಲಿ ಗೋಚರ ಭ್ರೂಣದ ಮೂಗಿನ ಮೂಳೆಗಳನ್ನು ಸಹ ಪರಿಶೀಲಿಸುತ್ತಾರೆ. ಭ್ರೂಣದ ಮೂಗಿನ ಮೂಳೆಗಳ ಅಸ್ತಿತ್ವವು ಡೌನ್ ಸಿಂಡ್ರೋಮ್ನ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ನ್ಯೂಕಲ್ ಅರೆಪಾರದರ್ಶಕ ಪರೀಕ್ಷೆಯಿಂದ ಮಗುವಿಗೆ ಅದರ ಎಲ್ಲಾ ಅಂಗಗಳನ್ನು ಹೊಂದಿದೆಯೆ ಎಂದು ಪರಿಶೀಲಿಸಬಹುದು, ಮತ್ತು ತಲೆ ಮತ್ತು ಮೆದುಳಿನು ಸಾಮಾನ್ಯವಾಗಿ ಅಭಿವೃದ್ಧಿ ಹೊಂದುತ್ತಿದೆಯೇ ಎಂದು ನೋಡಬಹುದಾಗಿದೆ. ಸ್ಪೈನ ಬೈಫಿಡಾದ ಇರುವಿಕೆಯನ್ನು ಕೂಡ ಈ ಸಮಯದಲ್ಲಿ ಖಾತರಿ ಪಡಿಸಲು ಅವರು ಬೆನ್ನುಮೂಳೆಯನ್ನೂ ಪರೀಕ್ಷಿಸುತ್ತಾರೆ. NT ಸ್ಕ್ಯಾನ್(Nuchal Transluency) ಜೊತೆಗೆ, ವೈದ್ಯರು ಗರ್ಭಾವಸ್ಥೆಯಲ್ಲಿ ದೇಹವು ಬಿಡುಗಡೆ ಮಾಡಿದ ಎರಡು ಹಾರ್ಮೋನುಗಳ ಮಟ್ಟವನ್ನು ಪರೀಕ್ಷಿಸಲು ರಕ್ತ ಪರೀಕ್ಷೆಯನ್ನು ಶಿಫಾರಸು ಮಾಡಬಹುದು. ಅವುಗಳೆಂದರೆ PAPPA (Pregnancy-Associated Plasma Protein–A) ಮತ್ತು free beta–HCG (Human Chorionic gonadotropin). ರಕ್ತದಲ್ಲಿ ಅಳೆಯಲಾದ ಎರಡು ಹಾರ್ಮೋನುಗಳು ಎರಡೂ ಜರಾಯುಗಳಿಂದ ಉತ್ಪತ್ತಿಯಾಗುತ್ತವೆ ಮತ್ತು ಪ್ರತಿ ಗರ್ಭಾವಸ್ಥೆಯಲ್ಲಿಯೂ ವಿಶಿಷ್ಟವಾಗಿವೆ. ಎರಡು ಹಾರ್ಮೋನ್ ಮಟ್ಟಗಳು ಅನುಕೂಲಕರವಾಗಿದ್ದರೆ ಅದು ಡೌನ್ ಸಿಂಡ್ರೋಮ್ನ ಇರುವಿಕೆಯನ್ನು ಕಡಿಮೆಗೊಳಿಸುತ್ತವೆ. NT ಸ್ಕ್ಯಾನ್ ಗೆ ರಕ್ತ ಪರೀಕ್ಷೆ ಸೇರಿಸುವುದರಿಂದ ಪರೀಕ್ಷೆಯ ಒಟ್ಟಾರೆ ನಿಖರತೆಯನ್ನು ಹೆಚ್ಚಿಸುತ್ತದೆ.