ನಿಮ್ಮ ಮಗುವಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಿರುತ್ತದೆ, ಏಕೆಂದರೆ ನಿಮ್ಮ ಮಗು ಗರ್ಭಾಶಯದಿಂದ ಹೊರಗಿನ ಜಗತ್ತಿನವರೆಗೆ ಅದ್ಭುತ ಪ್ರಯಾಣವನ್ನು ಮುಗಿಸಿದೆ. ಮೊದಲ ಕೆಲವೇ ಗಂಟೆಗಳಲ್ಲಿ, ಶಿಶುಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಅಗತ್ಯವಿದೆ ಆದ್ದರಿಂದ ಸಾಧ್ಯವಾದಷ್ಟು ಹತ್ತಿರದಲ್ಲಿರಲು ಬಯಸುತ್ತಾರೆ.
ಜನನದ ನಂತರ ಮೊದಲ ದಿನದಲ್ಲಿ ನಿಮ್ಮ ಮಗುವಿನ ನಿದ್ರೆಯ ಬಗ್ಗೆ ನೀವು ತಿಳಿಯಬೇಕಾದ ಕೆಲವು ಮೂಲಭೂತ ಅಂಶಗಳು ಇಲ್ಲಿವೆ. ನೀವು ಅನಗತ್ಯವಾಗಿ ಚಿಂತಿಸುವದಕ್ಕಿಂತ ಈ ಸಮಯದಲ್ಲಿ ಏನೆಲ್ಲಾ ನಿರೀಕ್ಷಿಸಬೇಕೆಂದು ತಿಳಿಯುವುದು ಒಳ್ಳೆಯದು.
ಹಗಲು ಮತ್ತು ರಾತ್ರಿಯ ನಡುವಿನ ವ್ಯತ್ಯಾಸವನ್ನು ಗೊತ್ತಿಲ್ಲದೇ ಇರುವದರಿಂದ ಜನನದ ನಂತರ ಮೊದಲ 24 ಗಂಟೆಗಳಲ್ಲಿ ಶಿಶುಗಳು ಬಹಳ ಕಾಲ ನಿದ್ರಿಸುತ್ತಾರೆ. ಕೆಲವೊಮ್ಮೆ ಅವರು 18 ಗಂಟೆಗಳವರೆಗೆ ನಿದ್ರೆ ಮಾಡುತ್ತಾರೆ, ಆದರೆ ಒಂದು ಅಂತರದಲ್ಲಿ ಅಲ್ಲ, ಮಧ್ಯಂತರಗಳಲ್ಲಿ. ಇದು ಕೂಡ ಸಾಮಾನ್ಯ. ಹಸಿವಾದಾಗ ಪ್ರತಿ 2-3 ಗಂಟೆಗೊಮ್ಮೆ ಮಗು ಎಚ್ಚರವಾಗಹುದು. ಮಗುವಿನ ಹೊಟ್ಟೆಯು ಇನ್ನೂ ತೀರಾ ಚಿಕ್ಕದಾಗಿರುವದರಿಂದ, ಅವನು ಅಥವಾ ಅವಳು ಹೆಚ್ಚಾಗಿ ಸ್ತನಪಾನ್ಯ ಮಾಡುವುದಿಲ್ಲ ಆದರೆ ಪ್ರತೀ ಕೆಲವು ಗಂಟೆಗಳಿಗೆ ಮಗುವಿಗೆ ಹಸಿವಾಗಬಹುದು. ಸ್ತನ್ಯಪಾನ ಮತ್ತು ಮಲವಿಸರ್ಜನೆ ಹೊರತುಪಡಿಸಿ, ಮಗು ಎಲ್ಲಾ ಸಮಯದಲ್ಲೂ ನಿದ್ರೆ ಮಾಡಬಹುದು.
ಜನ್ಮ ಪ್ರಕ್ರಿಯೆಯು ನಿಮ್ಮ ಮಗುವಿಗೆ ಸಾಕಷ್ಟು ಬಳಲಿಕೆ ಉಂಟುಮಾಡುತ್ತದೆ. ಇದರಿಂದ ಗುಣ ಹೊಂದಲು, ಅವರು ವಿಶೇಷವಾಗಿ ಮೊದಲ ದಿನದಲ್ಲಿ ದೀರ್ಘಕಾಲ ನಿದ್ರೆ ಮಾಡಬೇಕಾಗುತ್ತದೆ. ನಿಮ್ಮ ಮಗುವಿನ ಬೆಳವಣಿಗೆಗೆ ಸುದೀರ್ಘ ನಿದ್ರೆ ಅತ್ಯಗತ್ಯ. ಆದ್ದರಿಂದ ಮಗುವಿನ ನಿದ್ರೆಯ ಬಗ್ಗೆ ಚಿಂತಿಸಬೇಡಿ. ಬದಲಾಗಿ, ಮಗು ನಿದ್ದೆ ಮಾಡುವಾಗ ನೀವು ನಿದ್ದೆ ಮಾಡುವುದು ಒಳ್ಳೆಯ ಉಪಾಯ. ಹೊಸ ಅಮ್ಮನಾಗಿ ನೀವು ಈ ನಿತ್ಯಕ್ರಮಕ್ಕೆ ಹೊಂದಿಕೆ ಆಗಬೇಕು. ನಿಮ್ಮ ಮಗುವನ್ನು ಮಾತ್ರವಲ್ಲದೆ ನೀವು ನಿಮ್ಮ ಆರೋಗ್ಯದ ಕಾಳಜಿವಹಿಸಬೇಕು.
ಕೆಲವು ಹೊಸ ಅಮ್ಮಂದಿರು ತಮ್ಮ ಮಗುವಿನ ನಿದ್ರೆಯ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರೆ. ನಿಮ್ಮ ಮಗು ಸದ್ದಿಲ್ಲದೆ ಮಲಗಬಹುದು ಅಥವಾ ಕೆಲವೊಮ್ಮೆ ವಿಚಿತ್ರ ಶಬ್ದ ಮಾಡಬಹುದು. ಇದು ಸಾಮಾನ್ಯವಾಗಿದೆ ಮತ್ತು ಕ್ರಮೇಣ ನೀವು ಇದಕ್ಕೆ ಹೊಂದುಕೊಳ್ಳುವಿರಿ. ಕೆಲವು ಶಿಶುಗಳು ನಿದ್ದೆ ಮಾಡುವಾಗ ಕೆಲವೇ ಸೆಕೆಂಡುಗಳ ಕಾಲ ತ್ವರಿತವಾಗಿ ಉಸಿರಾಡುತ್ತಾರೆ ಮತ್ತು ಕೆಲವೊಮ್ಮೆ ಕೆಲ ಸೆಕೆಂಡುಗಳ ಕಾಲ ಉಸಿರಾಟ ನಿಲ್ಲಿಸುತ್ತಾರೆ. ಇದು ಸಾಮಾನ್ಯ ಮತ್ತು ತುಂಬಾ ಚಿಂತಿಸಬೇಕಾದ ವಿಷಯವಲ್ಲ. ನಿಮ್ಮ ಮಗುವನ್ನು ಒಂದು ಸ್ವಚ್ಛ ಮತ್ತು ಮೆತ್ತನೆಯ ಬಟ್ಟೆಯಲ್ಲಿ ಸುತ್ತಿ ಮಲಗಿಸುವದರಿಂದ ಮಗುವಿಗೆ ಗರ್ಭಾಶಯದಲ್ಲಿರುವ ಹಾಗೆ ಭಾಸವಾಗುತ್ತದೆ ಮತ್ತು ಇದು ನಿದ್ದೆ ಮಾಡಲು ಸಹಾಯಮಾಡುತ್ತದೆ.
ಮಗುವಿನ ಜನನ ಮತ್ತು ನವಜಾತ ಶಿಶುವನ್ನು ನೋಡಿಕೊಳ್ಳುವುದು ತಾಯಿಗೆ ಬಹಳ ದಣಿದ ಅನುಭವವಾಗಿದೆ. ಮಗುವಿನ ಪೋಷಣೆ ಸರಿಯಾಗಿ ನೀವು ಮಾಡುತ್ತಿದ್ದಾಗ ಮೊದಲ ಕೆಲವು ದಿನಗಳು ನೀವು ಆತಂಕಿತವಾಗಿ ಮತ್ತು ಚಿಂತೆಯಿಂದ ಕಳೆಯಬಹುದು. ಆದರೆ ಈ ನಿದ್ದೆಯಿಲ್ಲದ ರಾತ್ರಿಗಳು ಕೆಲವು ದಿನಗಳವರೆಗೆ ಅಷ್ಟೇ ಎಂದು ನೆನಪಿಡಿ. ಸಹಾಯ ಕೇಳಲು ಹಿಂಜರಿಯಬೇಡಿ. ಆಸ್ಪತ್ರೆಯಲ್ಲಿ, ನಿಮ್ಮ ವಿಶ್ರಾಂತಿ ಹಾಗು ಚೇತರಿಕೆಗೋಸ್ಕರ ಶುಶ್ರೂಷಕರು ಮತ್ತು ಇತರ ಸಿಬ್ಬಂದಿಗಳು ನಿಮಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ನಿಮ್ಮ ಸಂಗಾತಿ ಮತ್ತು ಕುಟುಂಬ ಸದಸ್ಯರು ನಿಮಗೆ ಸಹಾಯ ಮಾಡಲು ಖುಷಿ ಪಡುತ್ತಾರೆ. ನೀವು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರೆ, ನಿಮಗೆ ಬಹುಶಃ ಹೆಚ್ಚಿನ ಆರೈಕೆ ಸಿಗುತ್ತದೆ.
ನೆನಪಿಡಿ, ನಿಮ್ಮ ಮಗುವಿನ ದಿನಚರಿ ದಿನದಿಂದ ದಿನ ಬದಲಾಗುತ್ತಾ ಹೋಗುತ್ತದೆ. ನಿಮ್ಮ ಮಗು ಬೆಳೆಯುತ್ತಿರುವ ಈ ಸಮಯ ನಿಮಗೆ ತುಂಬಾ ಖುಷಿ ತರುವಲ್ಲಿ ಸಂಶಯವೇ ಇಲ್ಲ.