ಹಾಂಗ್ ಕಾಂಗ್ ನಲ್ಲಿ ನಡೆಸಿದ 905 ತಾಯಿ-ಮಗುವಿನ ಜೋಡಿಯ ವಿಶ್ಲೇಷಣೆಯ ಪ್ರಕಾರ, ನಿಮ್ಮ ಮಗುವಿನಲ್ಲಿ ಇನ್ಸುಲಿನ್ ಪ್ರತಿರೋಧ ಮತ್ತು ಅಧಿಕ ರಕ್ತದೊತ್ತಡದ ಅಪಾಯ ನಿಮ್ಮ ಅತಿರೇಕವಾದ ತೂಕದ ಹೆಚ್ಚಳದಿಂದ ಹೆಚ್ಚಾಗಬಹುದು ಎಂದು ತೋರಿಸಿದೆ.
ಮಗು ಮ್ಯಾಕ್ರೊಸೋಮಿಗೆ ಕೂಡ ಒಳಗಾಗಬಹುದು (ಮ್ಯಾಕ್ರೋಸೋಮಿ: ಮಗು ಸರಾಸರಿ ತೂಕಕ್ಕಿಂತ ಹೆಚ್ಚಾಗಿರುವ ಸ್ಥಿತಿ).
ಇದಲ್ಲದೆ, ಸಂಶೋಧಕರು ಹೇಳುವಂತೆ, ತಾಯಿ ಸಾಮಾನ್ಯ BMI (ಬಾಡಿ ಮಾಸ್ ಇಂಡೆಕ್ಸ್) ಅನ್ನು ಹೊಂದಿರಬಹುದು, ಇದು ಹೃದಯರಕ್ತನಾಳಕ್ಕೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ.
ಈ ಸಂಶೋಧನೆಯಲ್ಲಿ ಒಳಗೊಂಡಿರುವ ತಾಯಿಯಂದಿರ ತೂಕವು ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ (ಐಒಎಮ್) ಮಾರ್ಗದರ್ಶನಗಳನ್ನು ಆಧರಿಸಿದೆ ಮತ್ತು ಸಂಶೋಧಕರ ಪ್ರಕಾರ ಈ ಸಂಶೋಧನೆಯಲ್ಲಿ ಐಒಎಮ್ ಶಿಫಾರಸು ಪ್ರಮಾಣಕ್ಕಿಂತ ಹೆಚ್ಚಿನ ತೂಕವನ್ನು ಪಡೆದ ತಾಯಂದಿರ ಮಕ್ಕಳು ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದ ಸಕ್ಕರೆಯ ನಿಯಂತ್ರಣವನ್ನು ಹೊಂದಿರುವುದನ್ನು ಕಂಡುಕೊಂಡಿದ್ದಾರೆ.
ಆಶ್ಚರ್ಯಪಡುವ ವಿಚಾರವೆಂದರೆ, ಶಿಫಾರಸು ಮಾಡಿದ ತೂಕಕ್ಕಿಂತ ಕಡಿಮೆ ತೂಕವನ್ನು ಪಡೆದ ಮಹಿಳೆಯರ ಮಕ್ಕಳಲ್ಲಿ ಅದೇ ಪ್ರತಿಕೂಲವಾದ ಪರಿಣಾಮಗಳು ಕಂಡುಬಂದಿವೆ.
ಅಧ್ಯಯನದಲ್ಲಿ ಭಾಗವಹಿಸಿದ ಮಹಿಳೆಯರ ಪೂರ್ವ-ಗರ್ಭಾವಸ್ಥೆಯಿಂದ ಪ್ರಸವ ತಲುಪುವವರೆಗಿನ ಸರಾಸರಿ ತೂಕವು 15 ಕೆ.ಜಿ ಆಗಿತ್ತು. ಅಧ್ಯಯನವು ಕಂಡುಕೊಂಡ ಪ್ರಕಾರ, 41 ಪ್ರತಿಶತ ಮಹಿಳೆಯರು ಸಾಮಾನ್ಯ ತೂಕಕ್ಕಿಂತ ಹೆಚ್ಚು ಮತ್ತು 17 ಪ್ರತಿಶತದಷ್ಟು ಮಹಿಳೆಯರು ಕಡಿಮೆ ತೂಕವನ್ನು ಹೊಂದಿದ್ದರು. ಹಿಂದಿನ ಗುಂಪು ತರುಣ ಪೀಳಿಗೆ ಆಗಿದ್ದರು ಮತ್ತು ಹೆಚ್ಚಿನ BMI ಯನ್ನು ಹೊಂದಿದ್ದರು. ಏತನ್ಮಧ್ಯೆ, 42% ಮಹಿಳೆಯರು ಶಿಫಾರಸು ಮಾಡಿದ ತೂಕದ ವ್ಯಾಪ್ತಿಯಲ್ಲಿದ್ದರು.
ಲೀಡ್ ಸಂಶೋಧಕ ಪ್ರೊಫೆಸರ್ ವಿಂಗ್ ಹಂಗ್ ಟಾಮ್ ಅವರು ಗರ್ಭಧಾರಣೆಯ ತೂಕ ಹೆಚ್ಚಾಗುವಿಕೆಯ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ ಮತ್ತು "ಇಬ್ಬರಿಗೋಸ್ಕರ ತಿನ್ನುವುದು" ಸಿದ್ಧಾಂತವನ್ನು ನಂಬದೆ ತಳ್ಳಿಹಾಕಿ ಎಂದು ಹೇಳಿದರು. ಗರ್ಭಾವಸ್ಥೆಯಲ್ಲಿ "ಇಬ್ಬರಿಗೋಸ್ಕರ ತಿನ್ನುವುದು" ಹಾನಿಕಾರಕ ಎಂದು ಕೂಡ ಅವರು ಹೇಳಿದರು.
"ಗರ್ಭಾವಸ್ಥೆಯಲ್ಲಿ ದಿನಕ್ಕೆ 300 ಕಿಲೊ ಕ್ಯಾಲೊರಿಗಳು ಬೇಕಾಗುತ್ತದೆ. ಒಂದು ಗರ್ಭಿಣಿ ತಾಯಿಗೆ ಸಮರ್ಪಕ ಆಹಾರದಲ್ಲಿ ಅಗತ್ಯವಾದ ಸೂಕ್ಷ್ಮಪೌಷ್ಟಿಕತೆಗಳ ಅವಶ್ಯಕತೆ ಇದೆ."
"ಅತಿಯಾದ ತೂಕ ಹೆಚ್ಚಾಗುವುದನ್ನು ತಡೆಗಟ್ಟಲು ಅವರು ಮೀತವಾದ ವ್ಯಾಯಾಮವನ್ನು ಮಾಡಬೇಕಾಗುತ್ತದೆ."
ಮಗುವಿನ ಮೇಲೆ ಆಗುವ ಅಪಾಯಗಳಲ್ಲದೆ, ತಾಯಿಯ ಅಗತ್ಯಕ್ಕಿಂತ ಹೆಚ್ಚಿನ ತೂಕ ತಾಯಿಯ ಮೇಲೆ ಕೂಡ ಪರಿಣಾಮ ಉಂಟು ಮಾಡುತ್ತದೆ. ಗರ್ಭಾಶಯದ ಮಧುಮೇಹದಂತಹ (ತಾಯಿಯಲ್ಲಿ ಸಾಮಾನ್ಯ ಗ್ಲುಕೋಸ್ ಮಟ್ಟಕ್ಕಿಂತ ಹೆಚ್ಚಿನ ಮಟ್ಟವನ್ನು ಹೊಂದಿರುವ ಸ್ಥಿತಿ) ಅಪಾಯಗಳನ್ನು ಸಹ ಉಂಟು ಮಾಡುತ್ತದೆ ಎಂದು ಹಂಗ್ ಟಾಮ್ ಸ್ಪಷ್ಟಪಡಿಸಿದರು.
"ಈ ಸಂಶೋಧನೆಗಳು ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಳಿಗೆ ಪ್ರಮುಖ ಪರಿಣಾಮಗಳನ್ನು ಹೊಂದಿವೆ," ಎಂದು ಅಧ್ಯಯನದ ಲೇಖಕರು ತಿಳಿಸಿದರು.