ತೊಂದರೆ ಇಲ್ಲ! ಕಾರಣ ಯಾವುದಾದರು ಇರಲಿ ಆದರೆ ನೀವು ಆರೋಗ್ಯಕರ ಜೀವನಶೈಲಿ ಹೊಂದಿದ್ದರೆ 35 ವಯಸ್ಸಿನ ನಂತರ ಕಡಿಮೆ ಅಪಾಯಗಳೊಂದಿಗೆ ಗರ್ಭಿಣಿಯಾಗಬಹುದು ಎಂದು ಆಸ್ಟ್ರೇಲಿಯನ್ ಮತ್ತು ನ್ಯೂಜಿಲೆಂಡ್ ಜರ್ನಲ್ ಆಫ್ ಆಬ್ಸ್ಟೆಟ್ರಿಕ್ಸ್ ಮತ್ತು ಗೈನೆಕಾಲಜಿ ನಲ್ಲಿ ಪ್ರಕಟವಾದ ಸಂಶೋಧನೆ ಹೇಳುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಹಿಂದೆಂದಿಗಿಂತ ಹೆಚ್ಚು ಮಹಿಳೆಯರು 35 ನೇ ವಯಸ್ಸಿನ ನಂತರ ಜನ್ಮ ನೀಡುತ್ತಿದ್ದಾರೆ.
ಕಳೆದ 10 ವರ್ಷದಲ್ಲಿ ಆಸ್ಟ್ರೇಲಿಯಾದಲ್ಲಿ ಶೇ. 22, US ನಲ್ಲಿ ಶೇ. 15 ಮತ್ತು UK ಯಲ್ಲಿ ಶೇ. 20 ರಷ್ಟು ಮಹಿಳೆಯರು 35 ನೇ ವಯಸ್ಸಿನ ನಂತರ ಜನ್ಮ ನೀಡಿದ್ದಾರೆ. 1970 ರಲ್ಲಿ 35 ವರ್ಷದ ನಂತರ ಜನ್ಮ ನೀಡುವ ಮಹಿಳೆಯರ ಸಂಖ್ಯೆ 100 ರಲ್ಲಿ 1 ಆಗಿತ್ತು. ವೈದ್ಯಕೀಯ ತೊಡಕುಗಳ ಹೆಚ್ಚಳಕ್ಕೆ ತಾಯಿಯ ಹೆಚ್ಚಾದ ವಯಸ್ಸು ಕಾರಣವಾಗಿದೆ ಎಂದು ಪದೇ ಪದೇ ದೂರಲಾಗಿದೆ; ಆದರೆ ಇತ್ತೀಚಿನ ಸಂಶೋಧನೆ, ಸಿಸೇರಿಯನ್ ದರವು ಹೆಚ್ಚಾಗಿರುವುದರ ಮೇಲೆ ತಾಯಿಯ ವಯಸ್ಸು ಕಡಿಮೆ ಪರಿಣಾಮ ಹೊಂದಿದೆ ಎಂದು ಹೇಳಿದೆ.
35 ರ ನಂತರ ಗರ್ಭಧಾರಣೆ ಅಪಾಯ ಏಕೆ?
ಈ ಜೀವನ ಹಂತದಲ್ಲಿ ಫಲವಂತಿಕೆ ಕಡಿಮೆಯಾಗಲು ಆರಂಭವಾಗುತ್ತದೆ ಮತ್ತು ಗರ್ಭ ಧರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಸುಮಾರು 80% ರಷ್ಟು 35-39 ವಯಸ್ಸಿನ ಮಹಿಳೆಯರಿಗೆ ಗರ್ಭಿಣಿಯಾಗಲು 12 ತಿಂಗಳುಗಳು ಬೇಕಾಗಬಹುದು.
ಮಹಿಳೆಯರಲ್ಲಿ ವಯಸ್ಸಾದಂತೆ ಅಂಡೋತ್ಪತ್ತಿ ಆಗದೆ ಸಾಂದರ್ಭಿಕ ಋತುಚಕ್ರಗಳಾಬಹುದು. ಅಂಡೋತ್ಪತ್ತಿ ಆಗದೆ ಇದ್ದರೆ, ಗರ್ಭಾವಸ್ಥೆಯು ಸಂಭವಿಸುವುದಿಲ್ಲ. ಕಡಿಮೆ ಅಂಡಗಳು ಇರಬಹುದು ಆದರೆ ಇದರ ಗುಣಮಟ್ಟ ಕಡಿಮೆ ಆಗಿರಬಹುದು. ಅಪಸ್ಥಾನೀಯ ಗರ್ಭಧಾರಣೆಯ (ectopic pregnancy) ಹೆಚ್ಚಿನ ಸಾಧ್ಯತೆ ಇದೆ. ಅಪಸ್ಥಾನೀಯ ಗರ್ಭಧಾರಣೆಯಲ್ಲಿ ಅಂಡವು ಸಾಮಾನ್ಯವಾಗಿ ಗರ್ಭಾಶಯ ಹೊರತುಪಡಿಸಿ ಫಾಲೋಪಿಯನ್ ಟ್ಯೂಬ್ ನಲ್ಲಿ ಸಿಕ್ಕಿಕೊಂಡಿರುತ್ತದೆ.
35 ವಯಸ್ಸಿನ ನಂತರ ಸಿಸೇರಿಯನ್ ಗೆ ಸಂಭಂದಿಸಿದ ಅಪಾಯಗಳು ಜಾಸ್ತಿ ಆಗುತ್ತಾ ಹೋಗುತ್ತವೆ.
ಸಂಶೋಧನೆ ಏನು ಹೇಳುತ್ತದೆ?
ನಿಯಮಿತ ವ್ಯಾಯಾಮ ಮತ್ತು ಉತ್ತಮ ಆಹಾರದ ಸಮತೋಲನ ಕಾಪಾಡಿಕೊಂಡ ಮಹಿಳೆಯರು ಒಂದು ಆರೋಗ್ಯದ ಗರ್ಭಾವಸ್ಥೆ ಮತ್ತು ಮಗುವನ್ನು ಹೊಂದುತ್ತಾರೆ. ಈ ಮಹಿಳೆಯರು ಧೂಮಪಾನ ಮತ್ತು ಮಧ್ಯಪಾನದಿಂದ ದೂರ ಇರುವುದು ಒಳಿತು.
ಮಾತೃತ್ವವನ್ನು ಮುಂದೂಡುವ ಮಹಿಳೆಯರಲ್ಲಿ ತಮ್ಮ ಹೆಚ್ಚುತ್ತಿರುವ ವಯಸ್ಸು ಗರ್ಭಧಾರಣೆಗೆ ಅಷ್ಟೊಂದು ಅಪಾಯಕಾರಿಯೇನಲ್ಲ ಎಂದು ಈ ಸಂಶೋಧನೆ ಭರವಸೆ ನೀಡುತ್ತದೆ. ಯಾವುದೇ ವಯಸ್ಸಿನ ಮಹಿಳೆಯರು ಗರ್ಭಿಣಿಯಾಗುವುದಕ್ಕಿಂತ ಮೊದಲು ಸೂಕ್ತವಾದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
35 ರ ನಂತರದಲ್ಲಿ ಸಂಪೂರ್ಣವಾಗಿ ತೊಡಕುಗಳು ಇಲ್ಲದ ಗರ್ಭಾವಸ್ಥೆ ಊಹಿಸಲು ಸಾಧ್ಯವಾಗದಿದ್ದರೂ, ನೀವು ಉತ್ತಮ ಗುಣಮಟ್ಟದ ಪ್ರಸವಪೂರ್ವ ಆರೈಕೆಯಲ್ಲಿ ತೊಡಗಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಮತ್ತು ನೈಸರ್ಗಿಕ ಜನ್ಮವನ್ನು ಬೆಂಬಲಿಸುವ ವೈದ್ಯರನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಆರೋಗ್ಯವಾದ ಮಗುವಿನ ಜನನದ ಸಾಧ್ಯತೆಯನ್ನು ಹೆಚ್ಚಿಸಬಹುದು.