ಜರಾಯು ದೌರ್ಬಲ್ಯ (Abruptio placenta) ಎಂದರೇನು?
ಸಾಮಾನ್ಯವಾಗಿ ಜರಾಯು (ಹೊಕ್ಕುಳಬಳ್ಳಿ) ಶಿಶುವಿನ ಜನ್ಮದ ನಂತರ ಪ್ರಸವದ ಮೂರನೇ ಹಂತದಲ್ಲಿ ಬೇರ್ಪಡೆಯಾಗುತ್ತದೆ, ಆದರೆ ಜರಾಯು ದೌರ್ಬಲ್ಯ ಸಂದರ್ಭದಲ್ಲಿ ಪ್ರಸವದ ಅವಧಿಗಿಂತ ಮೊದಲೇ ಬೇರ್ಪಡೆಯಾಗುತ್ತದೆ ಮತ್ತು ರಕ್ತವು ಜರಾಯು ಮತ್ತು ಗರ್ಭಾಶಯದ ಗೋಡೆಯ ಮಧ್ಯೆ ಶೇಖರಣೆಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಮಹಿಳೆಯರು ಯೋನಿ ರಕ್ತಸ್ರಾವವನ್ನು ಗಮನಿಸಬಹುದು. ಕೆಲವೊಮ್ಮೆ ರಕ್ತಸ್ರಾವವು ಮರೆಯಾಗಬಹುದು ಮತ್ತು ಮಹಿಳೆಯರು ನೋವು ಅನುಭವಿಸಬಹುದು. ಆಕೆಯು ಹಠಾತ್ ವಿಪರೀತ ಹೊಟ್ಟೆ ನೋವು ಮತ್ತು ಚಡಪಡಿಕೆ ಅನುಭವಿಸಬಹುದು ಮತ್ತು ಮಗುವಿನ ಚಲನೆಯನ್ನು ಅನುಭವಿಸುವದೆ ಇರಬಹುದು. ವೈದ್ಯರು ಪರೀಕ್ಷಿಸಿದಾಗ ರಕ್ತದ ಶೇಖರಣೆಯ ಕಾರಣದಿಂದಾಗಿ ಅವರು ಹೆಚ್ಚು ನವಿರಾದ ಗರ್ಭಾಶಯವನ್ನು ಹೊಂದಿರುತ್ತಾರೆ ಮತ್ತು ಭ್ರೂಣ ಹೃದಯದ ಧ್ವನಿ ಕೇಳಿಸುವುದಿಲ್ಲ. ಬೇರ್ಪಡಿಸಿದ ಜರಾಯುವಿನಿಂದ ಪೌಷ್ಠಿಕಾಂಶ ಮತ್ತು ಆಮ್ಲಜನಕವನ್ನು ಪಡೆಯಲು ಸಾಧ್ಯವಾಗದ ಕಾರಣ ಭ್ರೂಣವು ನಿಧನ ಹೊಂದಬಹುದು. ಜರಾಯು ದೌರ್ಬಲ್ಯವು ಸಾಮಾನ್ಯವಾಗಿ 25 ವಾರಗಳ ಗರ್ಭಧಾರಣೆಯ ಸಮಯದಲ್ಲಿ ಕಂಡುಬರುತ್ತದೆ.
28 ವಾರಗಳ ಗರ್ಭಧಾರಣೆಯ ನಂತರದ ಸಮಯದಲ್ಲಿ ಪ್ರಸವದ ಮುಂಚೆ ಹಠಾತ್ ರಕ್ತಸ್ರಾವ ಇದ್ದರೆ ಪರೀಕ್ಷಿಸಬೇಕಾದ ಅವಶ್ಯಕತೆ ಇದೆ.
ನೋವುರಹಿತ ರಕ್ತಸ್ರಾವ ಇದ್ದು, ಗರ್ಭಶಾಯ ಆರಾಮದ ಸ್ಥಿತಿಯಲ್ಲಿದ್ದು, ಮಗುವಿನ ಸ್ಥಿತಿ ಸಾಮಾನ್ಯಕ್ಕಿಂತ ಎತ್ತರದಲ್ಲಿದ್ದು ಮತ್ತು ಮಗುವಿನ ಹೃದಯಬಡಿತ ಪ್ರಸ್ತುತದ್ಲಲಿದ್ದರೆ ಅದು ಪ್ಲಾಸೆಂಟಾ ಪ್ರಿವಿಯ (placenta previa) ಆಗಿರುವ ಸಾಧ್ಯತೆಯನ್ನು ತೋರುತ್ತದೆ.
ಆದರೆ, ವಿಪರೀತ ನೋವು ಆರಂಭವಾಗುವುದು, ರಕ್ತಸ್ರಾವದ ಜೊತೆಗೆ ನೋವಿನ ಸಂಕೋಚನಗಳು ಇದ್ದರೆ ಅದು ಜರಾಯು ದೌರ್ಬಲ್ಯದ ಸಂಕೇತವಾಗಿದೆ. ಗರ್ಭಾಶಯದ ಬಿಗಿ ಹೆಚ್ಚಾಗುವದರಿಂದ ಭ್ರೂಣವು ತೊಂದರೆಯಲ್ಲಿರಬಹುದು, ಮತ್ತು ಭ್ರೂಣದ ಭಾಗಗಳನ್ನು ಸ್ಪಷ್ಟವಾಗಿ ಭಾವಿಸಲಾಗುವುದಿಲ್ಲ, ಮತ್ತು ಭ್ರೂಣ ಹೃದಯದ ಶಬ್ದಗಳು ಕೂಡ ಸ್ಪಷ್ಟವಾಗಿಲ್ಲದಿರಬಹುದು. ರಕ್ತಸ್ರಾವದ ಸೋರಿಕೆಯೊಂದಿಗೆ ಪೊರೆಗಳ ಛಿದ್ರವು ಜರಾಯು ದೌರ್ಬಲ್ಯದ ಇರುವಿಕೆಯನ್ನು ಸ್ಪಷ್ಟಪಡಿಸುತ್ತದೆ. ಜರಾಯು ದೌರ್ಬಲ್ಯದ ಅಪಾಯಕಾರಿ ಅಂಶಗಳು ರೋಗ, ಆಘಾತ, ಆರೋಗ್ಯದ ಇತಿಹಾಸ, ಅಂಗರಚನಾಶಾಸ್ತ್ರ, ಮತ್ತು ವಸ್ತುಗಳಿಗೆ ಒಡ್ಡುವಿಕೆ ಸೇರಿವೆ. ಜರಾಯು ದೌರ್ಬಲ್ಯವು ಗರ್ಭಾವಸ್ಥೆಯ ಅವಧಿಯಲ್ಲಿ ತಾಯಿಯು ಯಾವುದೇ ಆಘಾತಕ್ಕೀಡಾದರೆ ಆರು ಪಟ್ಟು ಹೆಚ್ಚಾಗುತ್ತದೆ.
ಇದು ಏಕೆ ಸಂಭವಿಸುತ್ತದೆ?
ರಕ್ತ ಪೂರೈಕೆ ಕಡಿಮೆಯಾದಾಗ ಜರಾಯು ಅಕಾಲಿಕವಾಗಿ ಬೇರ್ಪಡಬಹುದೆಂದು ವಿಜ್ಞಾನಿಗಳು ನಂಬುತ್ತಾರೆ. ಜರಾಯುವಿಗೆ ರಕ್ತ ಪೂರೈಕೆ ಕಡಿಮೆಯಾಗುವ ಕಾರಣಗಳು ಈ ಕೆಳಗಿನಂತಿವೆ...
- ಗರ್ಭಾಶಯದ ಹರಡುವಿಕೆಯ ಕಾರಣದಿಂದಾಗಿ. ಜರಾಯುವಿನ ರಕ್ತನಾಳಗಳು ಹಾನಿಗೊಳಗಾಗಬಹುದು.
- ಗರ್ಭಾಶಯದ ನಾಳಗಳ ಸಂಕೋಚನದಿಂದಾಗಿ. ತಾಯಿಯಲ್ಲಿ ಕೊಕೇನ್ ಅಥವಾ ತಂಬಾಕು ಸೇವನೆಯಂತಹ ಕಾರಣಗಳಿಗಾಗಿ ನಾಳಗಳು ಸಂಕೋಚನಗೊಳ್ಳಬಹುದು ಅಥವಾ ಕೆಲವೊಮ್ಮೆ ತಾಯಿಯ ನಾಳಗಳು ಆರಂಭದಿಂದಲೂ ಸಂಕುಚಿತವಾಗಿರಬಹುದು.
ಮೇಲಿನ ಯಾವುದೇ ಕಾರಣದಿಂದಾಗಿ, ಜರಾಯು ಮಗುವಿಗೆ ಪೌಷ್ಟಿಕತೆಯನ್ನು ಬೆಳೆಸಲು ಮತ್ತು ಪೂರೈಸಲು ಸಾಕಷ್ಟು ರಕ್ತವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಸೌಮ್ಯವಾದ ಜರಾಯುವಿನ ದೌರ್ಬಲ್ಯವು ಸಣ್ಣ ರಕ್ತನಾಳಗಳನ್ನು ಹರಿದುಬಿಡುವ ಕಾರಣದಿಂದಾಗಿರಬಹುದು ಮತ್ತು ಮಗುವಿನಲ್ಲಿ ಸೌಮ್ಯವಾದ ರಕ್ತಸ್ರಾವ ಮತ್ತು ಮಗುವಿನಲ್ಲಿ ಕುಂಠಿತ ಬೆಳವಣಿಗೆಗೆ ಕಾರಣವಾಗುತ್ತದೆ. ಆದರೆ ಜರಾಯುವಿನ ವಿಪರೀತ ದೌರ್ಬಲ್ಯವು ಜರಾಯುವಿನ ಬೇರ್ಪಡಿಕೆಗೆ ಕಾರಣವಾಗುತ್ತದೆ ಮತ್ತು ಮಗುವಿನ ನಿಧನಕ್ಕೂ ಕೂಡ ಕಾರಣವಾಗಬಹುದು.
ಚಿಕಿತ್ಸೆ - ವಿಶ್ರಾಂತಿಸಿ. ಯೋನಿ ಪರೀಕ್ಷೆ ಯಾವುದೇ ಕ್ಲಿನಿಕ್ ನಲ್ಲಿ ಮಾಡಬಾರದು, ಆದರೆ ರೋಗಿಯನ್ನು ತೃತೀಯ ಆಸ್ಪತ್ರೆಗೆ ವರ್ಗಾಯಿಸಲು ವ್ಯವಸ್ಥೆ ಮಾಡಬೇಕು.
ರೋಗಿಯನ್ನು ಸಾಮಾನ್ಯವಾಗಿ ಆತಂಕವನ್ನು ಕಡಿಮೆ ಮಾಡಲು ಸೌಮ್ಯ ಮದ್ದನ್ನು ನೀಡಲಾಗುತ್ತದೆ. ರಕ್ತಸ್ರಾವವು ಕಡಿಮೆಯಾಗದಿದ್ದರೆ ಮತ್ತು ರೋಗಿಯು ಪ್ರಸವದ ಹತ್ತಿರದಲ್ಲಿದ್ದರೆ ಗರ್ಭಧಾರಣೆಯು ಸಕ್ರಿಯ ನಿರ್ವಹಣೆಯಿಂದ ಮಾಡಲಾಗುತ್ತದೆ. ಮಗುವಿನ ಶ್ವಾಸಕೋಶದ ಪ್ರಬುದ್ಧತೆಗೆ ಸಹಾಯ ಮಾಡಲು ಸ್ಟೀರಾಯ್ಡ್ ನೀಡಲಾಗುತ್ತದೆ ಮತ್ತು 48 ಗಂಟೆಗಳಲ್ಲಿ ಪ್ರಸವವನ್ನು ಪ್ರಚೋದಿಸಲಾಗುತ್ತದೆ. ಪ್ರಿಯಾಳ ಸಂದರ್ಭದಲ್ಲಿ, ರಕ್ತಸ್ರಾವವು ಎರಡು ದಿನಗಳಲ್ಲಿ ಬೆಡ್ ರೆಸ್ಟ್ ಮೂಲಕ ಕಡಿಮೆಯಾಯಿತು ಮತ್ತು ಆಕೆ ಆರೋಗ್ಯಕರ ಮಗುವನ್ನು ಪಡೆದಳು. ಆದ್ದರಿಂದ ಈ ಬ್ಲಾಗ್ ಮೂಲಕ, ನಾನು ಈ ವಿಷಯದ ಮೇಲೆ ಒತ್ತು ಕೊಡಬೇಕೆಂದು ಬಯಸುತ್ತೇನೆ, ದಯವಿಟ್ಟು ಗರ್ಭಾವಸ್ಥೆಯಲ್ಲಿ ಯಾವುದೇ ಅಸಹಜ ಸಂಕೇತಗಳು ಅಥವಾ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಎರಡನೆಯ ತ್ರೈಮಾಸಿಕದಲ್ಲಿ ರಕ್ತಸ್ರಾವವು ನೋವುರಹಿತವಾಗಿರುತ್ತದೆ, ಇದು ಸಾಮಾನ್ಯವಾಗಿ ಪ್ಲಾಸೆಂಟಾ ಪ್ರಿವಿಯ ಆಗಿರುತ್ತದೆ, ಆದರೆ ರಕ್ತಸ್ರಾವವು ನೋವಿನೊಂದಿಗೆ ಸಂಬಂಧಿಸಿದ್ದರೆ, ದಯವಿಟ್ಟು ತಕ್ಷಣ ನಿಮ್ಮ ವೈದ್ಯರ ಸಲಹೆ ಪಡೆಯಿರಿ.