ಹಾಗಾಗಿ ಈ ವರ್ಷದ ಈ ಸಮಯದಲ್ಲಿ ಹೆಚ್ಚು ತಂಪು ವಾತಾವರಣ ಇರುವದರಿಂದ ಸೋಂಕಿನ ಸಾಧ್ಯತೆಗಳು ಹೆಚ್ಚಾಗಿವೆ ಆದ್ದರಿಂದ ನೀವು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಗರ್ಭಿಣಿಯಾಗಿದ್ದು ಮತ್ತು ಅನಾರೋಗ್ಯ ಒಟ್ಟಿಗೆ ಇರುವ ಸನ್ನಿವೇಶ ಅಕ್ಷರಶಃ ಕೆಟ್ಟದ್ದಾಗಿದೆ. ನಿಮಗೆ ಹೆಚ್ಚು ಜ್ವರ ಇದ್ದಲ್ಲಿ ಇದು ನಿಮ್ಮ ಗರ್ಭಶಾಯದಲ್ಲಿನ ಮಗುವಿನ ಸುರಕ್ಷತೆಗೂ ಕೂಡ ಅಪಾಯಕಾರಿಯಾಗಬಹುದು. ಈ ಸಮಯದಲ್ಲಿ ನೀವು ಶುಷ್ಕ ಚರ್ಮ ಮತ್ತು ಒಣ ತುಟಿಗಳನ್ನು ಹೊಂದಬಹುದು. ಚಳಿಗಾಲದ ಗಾಳಿಯು ಸಾಕಷ್ಟು ಶುಷ್ಕವಾಗಿರುತ್ತದೆ ಮತ್ತು ಇದು ಶುಷ್ಕ ಚರ್ಮದ ಕಾರಣವಾಗಿದೆ. ಶುಷ್ಕ ಚರ್ಮದಿಂದ ದೂರವಿರಲು ಒಂದು ಮಾರ್ಗವೆಂದರೆ ನೀವು ಸಮರ್ಪಕವಾಗಿ ಹೈಡ್ರೇಟ್ ಆಗಿರುವುದು ಅಂದರೆ ನೀವು ಸಾಕಷ್ಟು ನೀರು ಕುಡಿಯುವದರಿಂದ ನಿಮ್ಮ ಚರ್ಮವನ್ನು ಕೋಮಲವಾಗಿರಿಸಬಹುದು. ಮಗುವಿನ ಬೆಳವಣಿಗೆಯಿಂದ ನಿಮ್ಮ ಚರ್ಮ ಈಗಾಗಲೇ ವಿಸ್ತಾರಗೊಳ್ಳುತ್ತಿದೆ. ಆದಾಗ್ಯೂ, ನೀವು ಈ ಸಮಯದಲ್ಲಿ ಸಾಕಷ್ಟು ನೀರು ಕುಡೀತಿಲ್ಲವಾದರೆ ಇದು ನಿಮ್ಮ ಚರ್ಮದ ಮೇಲೆ 'ಸ್ಟ್ರೇಟ್ಚ್ ಮಾರ್ಕ್ಸ್' ಗಳಿಗೆ ಕಾರಣವಾಗಬಹುದು. ಸ್ಟ್ರೇಟ್ಚ್ ಮಾರ್ಕ್ಸಗಳಿಂದ ದೂರ ಉಳಿಯಲು ನೀವು ಸಾಕಷ್ಟು ನೀರು ಕುಡಿಯೋದು ಒಂದು ಒಳ್ಳೆಯ ಉಪಾಯವಾಗಿದೆ.