Tuesday, 25 September 2018 06:52

ಗರ್ಭಾವಸ್ಥೆಯಲ್ಲಿ ನಿಮ್ಮ ಎಡಭಾಗದಲ್ಲಿ ಒರಗಿ ನಿದ್ರೆ ಮಾಡಲು ಏಕೆ ಹೇಳಲಾಗುತ್ತದೆ?

Written by

ಅನೇಕವೇಳೆ, ವೈದ್ಯರು ನಿಮಗೆ ರಾತ್ರಿಯಲ್ಲಿ ನಿಮ್ಮ ಎಡಭಾಗದಲ್ಲಿ ಒರಗಿ ನಿದ್ರೆ ಮಾಡಲು ಹೇಳುತ್ತಾರೆ. ಆದರೆ, ಏಕೆ?

 

ವೈದ್ಯರು ಹೀಗೆ ಹೇಳಲು ಒಂದು ವೈದ್ಯಕೀಯ ಕಾರಣವಿದೆ. ಅದಕ್ಕೂ ಮುಂಚೆ ನಿಮಗೆ ಇದು ತಿಳಿದಿರಲಿ; ಗರ್ಭಿಣಿ ಮಹಿಳೆಯ ಹೊಟ್ಟೆಯಲ್ಲಿ ಹಗ್ಗ-ಜಗ್ಗಾಟದ ಹಾಗೆ ಒಂದು ಅದ್ಭುತ ವಿದ್ಯಮಾನ ನಡೆದಿರುತ್ತದೆ.

 

ಮಗು ಗರ್ಭಾವಸ್ಥೆಯ ಸಮಯ ಮುಂದುವರಿದಂತೆಲ್ಲ ದೊಡ್ಡದಾಗಿ ಬೆಳೆಯುತ ತಾಯಿಯ ಹೊಟ್ಟೆಯೊಳಗಿನ ಆಂತರಿಕ ಅಂಗಗಳಿಗೆ ಮತ್ತು ರಕ್ತನಾಳಗಳಿಗೆ ತೀವ್ರ ಒತ್ತಡ ನೀಡುತ್ತವೆ. ಮಗು ಅಮ್ಮನ ಮೂತ್ರಕೋಶದ ಕಡೆ ತೆವಳುವುದು ಮತ್ತು  ಕರುಳಿಗೆ ಒದೆಯುವುದು ಕೆಲವೊಮ್ಮೆ ನೋವುಂಟುಮಾಡುತ್ತದೆ ಮತ್ತು ಇದು ಅಹಿತಕರವಾಗಿರುತ್ತದೆ. ಆದರೆ, ಎಡಭಾಗದಲ್ಲಿ ಮಲಗುವ ಈ ಉಪಾಯ ನಿಮ್ಮ ಅನುಕೂಲಿತ ಅಥವಾ ಆರಾಮದಾಯಕದ ನಿದ್ದೆಗೆ ಸಂಬಂಧಿಸಿಲ್ಲ.

 

ತಾಯಿಯ ಇನ್ಫೀರಿಯರ್ ವೆನಾ ಕಾವಾ (IVC: Inferior Vena Cava)

ಇನ್ಫೀರಿಯರ್ ವೆನಾ ಕವಾ ಬೆನ್ನೆಲುಬಿನ ಬಲಭಾಗದಲ್ಲಿ ಇರುವ ದೊಡ್ಡ ಅಭಿಧಮನಿಯಾಗಿದೆ ಮತ್ತು ದೇಹದ ಕೆಳಭಾಗದಿಂದ ಹೃದಯಕ್ಕೆ ರಕ್ತವನ್ನು ಸಾಗಿಸಲು ಕಾರಣವಾಗಿದೆ. ಒಂದು ಗರ್ಭಿಣಿ ಮಹಿಳೆ ತನ್ನ ಬೆನ್ನ ಮೇಲೆ ಮಲಗಿದಾಗ, ಶಿಶು ನಿರಂತರವಾಗಿ ಇನ್ಫೀರಿಯರ್ ವೆನಾ ಕಾವಾವನ್ನು ಸಂಕುಚಿತಗೊಳಿಸುತ್ತದೆ ಮತ್ತು ಹೀಗಾಗಿ ದೇಹದ ಕೆಳಭಾಗದ ಅರ್ಧಭಾಗದಿಂದ ಹೃದಯಕ್ಕೆ ಸಾಗುವ ರಕ್ತವನ್ನು ಕಡಿಮೆ ಮಾಡುತ್ತದೆ.

 

ಹೃದಯಕ್ಕೆ ಕಡಿಮೆ ರಕ್ತ ಎಂದರೆ ಹೃದಯದಿಂದ ಕಡಿಮೆ ರಕ್ತ ಹೊರಗೆ - ಇದರರ್ಥ, ತಾಯಿಯಲ್ಲಿ ರಕ್ತದೊತ್ತಡದ ಕುಸಿತ ಮತ್ತು ತಾಯಿ ಮತ್ತು ಮಗುವಿಗೆ ರಕ್ತದ ಆಮ್ಲಜನಕದ ಕುಸಿತವನ್ನು ಸೂಚಿಸುತ್ತದೆ (ತಾಯಿಯ ರಕ್ತವು ಮಗುವಿಗೆ ಆಮ್ಲಜನಕವನ್ನು ಸರಬರಾಜು ಮಾಡುತ್ತದೆ). ತಾಯಂದಿರು ಮತ್ತು ಮಕ್ಕಳು ಹೃದಯದಿಂದ ಹೊರಸಾಗುವ ರಕ್ತದ ಪ್ರಮಾಣದ ಸ್ವಲ್ಪ ಬದಲಾವಣೆಯೊಂದಿಗೆ ಹೊಂದಿಕೊಳ್ಳುತ್ತಾರೆ ಆದರೆ ಒತ್ತಡದೊಳಗಿನ IVC ಈಗಾಗಲೇ ರಕ್ತದೊತ್ತಡ ಮತ್ತು ಉಸಿರಾಟದ ಸಮಸ್ಯೆಗಳನ್ನು ಹೊಂದಿರುವ ಗರ್ಭಿಣಿಯರಿಗೆ ಅಪಾಯಕಾರಿ ಅಂಶವಾಗಬಹುದು. ಆಸ್ತಮಾ ಅಥವಾ ಸ್ಲೀಪ್ ಅಪ್ನಿಯ (ರಾತ್ರಿಯಲ್ಲಿ ಉಸಿರಾಟ ಪದೇ ಪದೇ ಆರಂಭಗೊಂಡು ನಿಲ್ಲುವ ಸ್ಥಿತಿ) ಸ್ಥಿತಿಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಈಗಾಗಲೇ ತಮ್ಮ ದೇಹಕ್ಕೆ ಮತ್ತು ಶಿಶುಗಳಿಗೆ ಆಮ್ಲಜನಕವನ್ನು ಸಾಗಿಸುವಲ್ಲಿ ತೊಂದರೆ ಇರುತ್ತದೆ. ಈತರಹದ ಪರಿಸ್ಥಿತಿಗಳು ನೀವು ನಿಮ್ಮ ಬೆನ್ನ ಮೇಲೆ ನಿದ್ದೆ ಮಾಡುವಾಗ ಕಡಿಮೆ ರಕ್ತ ಹರಿವಿನಂತಹ ಪರಿಸ್ಥಿತಿಯೊಂದಿಗೆ ಕೂಡಿದಾಗ ಅಪಾಯಕಾರಿಯಾಗಬಹುದು.

 

ಅನೇಕ ಅಧ್ಯಯನಗಳ ಪ್ರಕಾರ ಗರ್ಭಿಣಿ ಮಹಿಳೆ ಬೆನ್ನ ಮೇಲೆ ಮಲಗುವದರಿಂದ 20 ವಾರಗಳ ನಂತರದ ಗರ್ಭಪಾತವಾಗುವ (Stillbirth) ಅಪಾಯ ಹೆಚ್ಚಾಗುತ್ತದೆ.

 

ಇತ್ತೀಚಿನ ಅಧ್ಯಯನದ ಪ್ರಕಾರ, BJOG: ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಅಂತರರಾಷ್ಟ್ರೀಯ ನಿಯತಕಾಲಿಕವು 28 ವಾರಗಳ ನಂತರದ ಮಹಿಳೆಯರು ಸಾಮಾನ್ಯ ಆರೋಗ್ಯಕರ ಗರ್ಭಿಣಿಯರಿಗಿಂತ ಗರ್ಭಪಾತವಾದ ಹಿಂದಿನ ರಾತ್ರಿಯಲ್ಲಿ 2.3 ರಷ್ಟು ತಮ್ಮ ಬೆನ್ನ ಮೇಲೆ  ಮಲಗಿರುವದನ್ನು ಕಂಡುಕೊಂಡಿದೆ.

 

ಬಲಭಾಗದಲ್ಲಿ ಒರಗಿ ಮಲಗುವುದು ಸರಿಯೇ?

ಗರ್ಭಾವಸ್ಥೆಯಲ್ಲಿ ಎಡ-ಬಲಭಾಗದ ಮಲಗುವಿಕೆ ಬಗ್ಗೆ ಸಾಕಷ್ಟು ಅಧ್ಯಯನಗಳು ಇಲ್ಲದಿರುವುದರಿಂದ ಇದನ್ನು ಹೇಳಲು ಕಷ್ಟ. 2011 ರಲ್ಲಿ BMJ ಎಂಬ ಪತ್ರಿಕೆಯಲ್ಲಿ ಪ್ರಕಟವಾದ 155 ಮಹಿಳೆಯರ ಮೇಲಿನ ಅಧ್ಯಯನವು ಗರ್ಭಪಾತವಾಗುವ ಹಿಂದಿನ ರಾತ್ರಿ ತಮ್ಮ ಬಲಕ್ಕೆ ಮಲಗಿದ್ದ ಮಹಿಳೆಯರಲ್ಲಿ ಗರ್ಭಪಾತದ ಹೆಚ್ಚಿನ ಅಪಾಯವನ್ನು ಕಂಡುಕೊಂಡಿದೆ, ಆದರೆ ಈ ಫಲಿತಾಂಶಗಳು ಈ ಅಧ್ಯಯನದ ನಂತರ ಮತ್ತೆ ಪುನರಾವರ್ತನೆಯಾಗಿಲ್ಲ.

 

ಆದರೆ, ಬಲಭಾಗದಲ್ಲಿ ಮಲಗುವುದು ನಿಮ್ಮ ಎಡಭಾಗದಲ್ಲಿ ಮಲಗುವುದಕ್ಕಿಂತ ತುಂಬಾ ಒಳ್ಳೆಯದು ಎಂಬುದಕ್ಕೆ ಸ್ಪಷ್ಟವಾದ ಸಾಕ್ಷ್ಯಗಳಿಲ್ಲ. ನೀವು ಆರೋಗ್ಯಕರ ಗರ್ಭಾವಸ್ಥೆ ಹೊಂದಿದ್ದರೆ ನಿಮ್ಮ ಬಲಭಾಗದಲ್ಲಿ ಒರಗಿ ಮಲಗುವುದರ ಬಗೆಗೆ ಚಿಂತಿಸಬೇಡಿ. ನೆನಪಿಡಿ, ಗರ್ಭಾವಸ್ಥೆಯಲ್ಲಿ ನೀವು ಆರಾಮದಾಯಕ ನಿದ್ರೆ ಪಡೆಯುವುದು ಅವಶ್ಯಕ.

 

ನಿದ್ರೆಯ ಕೊರತೆ (ರಾತ್ರಿಯಲ್ಲಿ 5 ಅಥವಾ 6 ಗಂಟೆಗಳಿಗಿಂತಲೂ ಕಡಿಮೆ ನಿದ್ರೆ) ಗರ್ಭಧಾರಣೆಯ ಮಧುಮೇಹ ಮತ್ತು ಪ್ರಿಕ್ಲಾಂಪ್ಸಿಯದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ಸೂಚಿಸುತ್ತವೆ.

Last modified on Tuesday, 25 September 2018 07:48
Dr Padma

Dr Padma is a Family care physician and is the Founder and CEO of MedHealthTV.

www.medhealthtv.com

Leave a comment

Make sure you enter all the required information, indicated by an asterisk (*). HTML code is not allowed.

Voodoo death spells that work instantly. To cast a death curse you need to summon the ancestral spirits. Real spell casters cast a voodoo death spell. Riyathakur's official pornstar page https://pornlux.com/pornstar/riyathakur. https://farmaciamillefolia.ro/

House of Jack Casino is your ultimate online gaming destination! Experience non-stop action with thrilling games and fantastic bonuses. Dive into the excitement at House of Jack Casino, where remarkable rewards await you.