ಸಂಶೋಧಕರು ಶಿಶುಗಳ ಜೀವನದ ಮೊದಲ ಮೂರು ವರ್ಷಗಳಲ್ಲಿ ತೂಕ ಮತ್ತು ಎತ್ತರವನ್ನು ಸತತವಾಗಿ ಅಳತೆ ಮಾಡಿದ್ದಾರೆ. ಈ ಅಧ್ಯಯನದಲ್ಲಿ ನೆದರಲ್ಯಾಂಡ್ ನ 4,435 ಮಕ್ಕಳನ್ನು ಹುಟ್ಟಿನಿಂದ ಹಿಡಿದು 10 ವರ್ಷ ಆಗುವವರೆಗೂ ಪರೀಕ್ಷೆ ಮಾಡಲಾಯಿತು. ಸಂಶೋಧಕರು ಮಕ್ಕಳ ಶ್ವಾಸಕೋಶದ ಕಾರ್ಯಗಳ ಬಗ್ಗೆ ನಿಗಾಹ ಇಟ್ಟಿದ್ದರು ಮತ್ತು ಅವರ ತಂದೆ-ತಾಯಿಯರ 10 ವರ್ಷ ವಯಸ್ಸಿನ ಮುಂಚೆಯ ಆರೋಗ್ಯದ ಇತಿಹಾಸದ ಬಗೆಗೆ ಸಂಧರ್ಶನ ಮಾಡಿದರು.
ಈ ಅಧ್ಯಯನದ ಪ್ರಕಾರ, ಮೊದಲ ವರ್ಷಗಳಲ್ಲಿ ಹೆಚ್ಚು ತೂಕ ಹೆಚ್ಚಾಗುವುದು ಮಕ್ಕಳಲ್ಲಿ ದುರ್ಬಲ ಶ್ವಾಸಕೋಶ ಮತ್ತು ಬಾಲ್ಯದ ಆಸ್ತಮಾದ ಹೆಚ್ಚಿನ ಅಪಾಯವನ್ನು ಉಂಟು ಮಾಡುತ್ತದೆ. ಮಕ್ಕಳಲ್ಲಿ ಸ್ಥಿರವಾದ ಬೆಳವಣಿಗೆ ಆಸ್ತಮಾದ ಕಡಿಮೆ ಅಪಾಯ ಉಂಟು ಮಾಡುತ್ತದೆ ಎಂದು ತೋರಿಸಿತು.
"ಫಲಿತಾಂಶಗಳು ತೋರಿಸಿದಂತೆ, ತೂಕ ಮತ್ತು ಬಾಡಿ ಮಾಸ್ ಇಂಡೆಕ್ಸ್ ಹೆಚ್ಚಾಗುವ ವೇಗ 10 ವರ್ಷ ವಯಸ್ಸಿನಲ್ಲಿ ದುರ್ಬಲ ಶ್ವಾಸಕೋಶ ಹೊಂದಲು ಕಾರಣವಾಗಿದೆ," ಎಂದು ಬಾರ್ಸಿಲೋನಾ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ನ ಪ್ರಮುಖ ಲೇಖಕ ಅಸೋಸಿಯೇಟ್ ರಿಸರ್ಚ್ ಪ್ರಾಧ್ಯಾಪಕ ಮಾರಿಬೆಲ್ ಕ್ಯಾಯಾಸ್ ಸ್ಪಷ್ಟಪಡಿಸಿದರು. ಅವರು ವಿಶೇಷವಾಗಿ, ಆ ಮಕ್ಕಳು ತಮ್ಮ ಒಟ್ಟು ಶ್ವಾಸಕೋಶದ ಪರಿಮಾಣಕ್ಕೆ ಸಂಬಂಧಿಸಿದಂತೆ ಸಣ್ಣ ವಾಯುಮಾರ್ಗಗಳಿಗೆ ಸಂಬಂಧಿಸಿದ ಒಂದು ಕಡಿಮೆ ಕಾರ್ಯವನ್ನು ಹೊಂದಿದ್ದಾರೆ ಎಂದು ಗಮನಿಸಿದರು.
ಕಾಲ ಕಳೆದಂತೆ ಮಕ್ಕಳ ಬಾಡಿ ಮಾಸ್ ಇಂಡೆಕ್ಸ್ ಅತಿ ಹೆಚ್ಚು ಆದಂತೆ ಅವರ ಶ್ವಾಸಕೋಶದ ಕಾರ್ಯ ನಿರ್ವಹಣೆ ಕೂಡ ಸುಧಾರಿಸಿರುವದನ್ನು ಗಮನಿಸದರು, ಮತ್ತು, ಬಾಲಕರಲ್ಲಿ ಅಸ್ತಮಾ ಅಪಾಯ ಕಡಿಮೆಯಾಗುವದನ್ನು ಕೂಡ ಕಂಡುಕೊಂಡರು. ಅವರ ಪ್ರಕಾರ, ಬಾಲ್ಯದ ಬೆಳವಣಿಗೆಯು ಶ್ವಾಸಕೋಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಫಲಿತಾಂಶಗಳು ದೃಢಪಡಿಸುತ್ತವೆ.
ಇತ್ತೀಚಿನ ಅನೇಕ ಅಧ್ಯಯನಗಳು ಬಾಲ್ಯದ ಆಸ್ತಮಾದ ಹೆಚ್ಚಿನ ಅಪಾಯ ಮತ್ತು ದುರ್ಬಲ ಶ್ವಾಸಕೋಶದ ಕಾರ್ಯದ ಸಂಬಂಧವನ್ನು ಅತಿಯಾದ ತೂಕ ಹೆಚ್ಚಾಗುವುದರೊಂದಿಗೆ ಸಂಬಂಧಿಸಿದೆ ಎಂದು ತಿಳಿಸಿವೆ.