ಮೈಕೋಬ್ಯಾಕ್ಟೀರಿಯಂ ಟ್ಯುಬೆರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾವು ಟಿಬಿಗೆ ಕಾರಣವಾಗುತ್ತದೆ. 19 ನೇ ಶತಮಾನದ ಆರಂಭದಲ್ಲಿ ಟಿಬಿ ಪ್ರಮುಖ ಸಾಂಕ್ರಾಮಿಕ ರೋಗ ಆಗಿತ್ತು ಮತ್ತು ಅನೇಕ ಸಾವಿಗೆ ಕಾರಣವಾಯಿತು. ಆದರೆ ಜರ್ಮನ್ ವಿಜ್ಞಾನಿ ರಾಬರ್ಟ್ ಕೊಚ್ ಅವರು ಟಿಬಿಗೆ ಕಾರಣವಾದ ಬ್ಯಾಕ್ಟೀರಿಯಾವನ್ನು ಕಂಡುಹಿಡಿದ ನಂತರ ಕ್ಷಯರೋಗವನ್ನು ತಡೆಗಟ್ಟಲು ಮತ್ತು ಚಿಕಿತ್ಸೆಯನ್ನು ನಡೆಸಲು ಅನೇಕ ಲಸಿಕೆಗಳು ಮತ್ತು ಔಷಧಗಳನ್ನು ಕಂಡುಹಿಡಿಯಲಾಯಿತು.
ವಿಶ್ವ ಆರೋಗ್ಯ ಸಂಸ್ಥೆಯ ಒಂದು ವರದಿ ಪ್ರಕಾರ ಪ್ರತಿ ವರ್ಷಕ್ಕೆ 90 ಲಕ್ಷ ಜನ ಟಿಬಿ ಕಾಯಿಲೆಗೆ ಒಳಗಾಗುತ್ತಾರೆ. 15-44 ವಯಸ್ಸಿನ ಮಹಿಳೆಯರ ಪ್ರಮುಖ 3 ಸಾವಿನ ಕಾರಣಗಳಲ್ಲಿ ಟಿಬಿ ಕೂಡ ಒಂದಾಗಿದೆ.
ಪ್ರಮುಖಾವಾಗಿ ಎರಡು ವಿಧದ ಟಿಬಿ ಕಾಯಿಲೆಗಳಿವೆ:
ಸುಪ್ತ ಟಿಬಿ (Latent TB): ಬ್ಯಾಕ್ಟೀರಿಯಾ ದೇಹದಲ್ಲಿ ನಿಷ್ಕ್ರಿಯ ಸ್ಥಿತಿಯಲ್ಲಿ ಇರುತ್ತದೆ. ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ ಮತ್ತು ಸಾಂಕ್ರಾಮಿಕವಾಗಿಲ್ಲ, ಆದರೆ ಅವುಗಳು ಯಾವುದೇ ಸಮಯದಲ್ಲಿ ಕೂಡ ಸಕ್ರಿಯವಾಗಬಹುದು.
ಸಕ್ರಿಯ ಟಿಬಿ (Active TB): ಸಕ್ರಿಯ ಟಿಬಿ ಇದ್ದಲ್ಲಿ ಬ್ಯಾಕ್ಟೀರಿಯಾಗಳು ರೋಗಲಕ್ಷಣಗಳನ್ನು ಉಂಟುಮಾಡುತ್ತವೆ ಮತ್ತು ಇವು ಇತರರಿಗೆ ಕೂಡ ಹರಡುತ್ತದೆ.
- ಟಿಬಿ ಸಾಮಾನ್ಯವಾಗಿ ವಯಸ್ಕರಲ್ಲಿ ಅಥವಾ ದುರ್ಬಲ ಪ್ರತಿರಕ್ಷಣಾ ಶಕ್ತಿ ಹೊಂದಿರುವ ಶಿಶುಗಳ ಮೇಲೆ ಪರಿಣಾಮ ಬೀರುತ್ತದೆ. ಟಿಬಿ ಇರುವ ವ್ಯಕ್ತಿಯು (ಅವರ ಶ್ವಾಸಕೋಶ ಟಿಬಿಯಿಂದ ಭಾದಿತವಾದಾಗ) ಕೆಮ್ಮಿದಾಗ, ಸೀನಿದಾಗ, ಉಗುಳಿದಾಗ, ನಕ್ಕಾಗ ಮತ್ತು ಮಾತನಾಡುವಾಗ ಗಾಳಿಯ ಮೂಲಕ ಹರಡುವ ಸಾಧ್ಯತೆ ಇದೆ. ಇದು ಸಾಮಾನ್ಯವಾಗಿ ಸಂದಣಿ ಅಥವಾ ಜನಸಮೋಹ ವಸಾಹತುಗಳಲ್ಲಿ ಕಂಡುಬರುತ್ತದೆ. ಉಸಿರೆಳೆದಾಗ ಬ್ಯಾಕ್ಟೀರಿಯಾವು ಶ್ವಾಸಕೋಶಗಳನ್ನು ಮೊದಲು ಆಕ್ರಮಿಸುತ್ತದೆ ಮತ್ತು ನಂತರ ಇತರ ಅಂಗಗಳಿಗೆ ಹರಡಬಹುದು.
- ನಿರಂತರವಾದ ಕೆಮ್ಮು, ಸಾಧಾರಣ ಜ್ವರ, ತೂಕ ನಷ್ಟ, ರಕ್ತದ ಲೇಪಿತ ಸ್ಫುಟಮ್/ಉಗುಳು, ಎದೆ ನೋವು ಮತ್ತು ನಿರಂತರ ಬೆವರುವಿಕೆ ಮುಂತಾದ ರೋಗಲಕ್ಷಣಗಳು ಟಿಬಿ ಕಾಯಿಲೆಯ ಎಚ್ಚರಿಕೆಯ ಸಂಕೇತವಾಗಿವೆ ಮತ್ತು ಹೀಗಿದ್ದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
- ಮಕ್ಕಳಲ್ಲಿ, ಟಿಬಿ ಮೆದುಳಿನ ಹೊದಿಕೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಇದು ಟಿಬಿ ಮಿದುಳ್ಪೊರೆಯುರಿತಕ್ಕೆ (TB Meningitis) ಕಾರಣವಾಗಬಹುದು.
ಮಗುವಿನಲ್ಲಿ ಟಿಬಿ ಕಾಯಿಲೆ ಇರುವಿಕೆಯನ್ನು ಖಾತರಿ ಪಡಿಸಿದ ಮೇಲೆ 6 ರಿಂದ 9 ತಿಂಗಳವರೆಗೆ ಚಿಕಿತ್ಸೆ ನೀಡಬೇಕಾಗಬಹುದು. ಇದು ಹಲವಾರು ತೊಡಕುಗಳಿಗೆ ಕಾರಣವಾಗಬಹುದು.
ಟಿಬಿ ಯನ್ನು ನಾವು ಹೇಗೆ ತಡೆಗಟ್ಟಬಹುದು?
- ಟಿಬಿ ಇರುವ ರೋಗಿಗಳಿಂದ ದೂರವಿರುವುದು. ಆದರೆ ಕೆಲವೊಮ್ಮೆ ರೋಗಿಯು ಯಾವುದೇ ರೋಗಲಕ್ಷಣಗಳನ್ನು ಪ್ರದರ್ಶಿಸುವುದಿಲ್ಲ ಮತ್ತು ಈ ಸಂದರ್ಭದಲ್ಲಿ ಮಗುವಿಗೆ ಕಡಿಮೆ ಪ್ರತಿರಕ್ಷಣಾ ಶಕ್ತಿ ಇದ್ದರೆ, ಮಗುವಿಗೆ ಸುಲಭವಾಗಿ ಟಿಬಿ ಹರಡುವ ಸಾಧ್ಯತೆಗಳಿವೆ.
- ಮನೆಯಲ್ಲಿ ಚೆನ್ನಾಗಿ ಗಾಳಿ-ಬೆಳಕು ಬರುವ ಹಾಗೆ ನೋಡಿಕೊಳ್ಳುವುದು.
- ಬಿ.ಸಿ.ಜಿ ಲಸಿಕೆ ಟಿಬಿ ಯ ಕನಿಷ್ಠ ತೊಂದರೆಗಳನ್ನು ತಡೆಗಟ್ಟಬಹುದು
ಯಾವಾಗ ಮತ್ತು ಹೇಗೆ ಬಿ.ಸಿ.ಜಿ ಲಸಿಕೆ ನೀಡಲಾಗುತ್ತದೆ?
ಹುಟ್ಟಿದ ಬಳಿಕ ನವಜಾತ ಶಿಶುಗಳಿಗೆ ಬಿಸಿಜಿ ಲಸಿಕೆ ನೀಡಲಾಗುತ್ತದೆ. ಇದು ಮಗುವಿನ ಎಡಗೈ ತೋಳಿನ ಮೇಲ್ಭಾಗದಲ್ಲಿ ನೀಡಲಾಗುತ್ತದೆ. ಲಸಿಕೆಯ ಒಂದು ವಾರದ ನಂತರ ಚುಚ್ಚುಮದ್ದು ನೀಡಿದ ಜಾಗದಲ್ಲಿ ಒಂದು ಚಿಕ್ಕ ಊತ ಕಾಣಿಸಕೊಳ್ಳಬಹುದು ಮಾತು ಕೆಲ ದಿನಗಳ ನಂತರ ಒಂದು ಪೊರೆ ಯಾಗಿ ಕಾಣಿಸಕೊಳ್ಳಬಹುದು. ಇದು ಕೆಲವೊಮ್ಮೆ ಕೆಂಪು ಬಣ್ಣಕ್ಕೆ ತಿರುಗಬಹುದು ಮತ್ತು ಕೆಲವು ಬಾರಿ ಇದರಿಂದ ಕೀವು ಹೊರಗೆ ಬರಬಹುದು. ಇದಕ್ಕೆ ಯಾವುದೇ ಔಷದಿಯನ್ನು ಲೇಪಿಸುವ ಅಗತ್ಯವಿಲ್ಲ. ಒಂದು ಸಂಶ್ಲೇಷಿತ/ಶುದ್ಧ ಹತ್ತಿಯಿಂದ ಒರೆಸಿದರೆ ಸಾಕು. ಕೆಲವು ವಾರಗಳ ನಂತರ, ಲಸಿಕೆ ಹಾಕಿದ ಜಾಗದಲ್ಲಿ ಗಾಯವು ರೂಪುಗೊಳ್ಳುತ್ತದೆ. ಲಸಿಕೆ ಹಾಕಿದ ಜಾಗದಲ್ಲಿ ತುಂಬಾ ಊತ ಕಂಡು ಬಂದಲ್ಲಿ ಮತ್ತು ಮಗು ಜ್ವರದಿಂದ ಬಳಲುತ್ತಿದ್ದರೆ, ದಯವಿಟ್ಟು ನಿಮ್ಮ ವೈದ್ಯರನ್ನು ನೋಡಿ.
ನಿಮಗಿದು ಗೊತ್ತೇ! ಜಗತ್ತಿನ ಎಲ್ಲ ದೇಶಗಳು ಈ ಲಸಿಕೆಯನ್ನು ಮಕ್ಕಳಿಗೆ ನೀಡುವುದಿಲ್ಲ. ಸಾಮಾನ್ಯವಾಗಿ, ಹೆಚ್ಚಿನ ಮಟ್ಟದಲ್ಲಿ ಟಿಬಿ ಇರುವ ದೇಶಗಳಲ್ಲಿ ಮಾತ್ರ, ಎಲ್ಲಾ ಮಕ್ಕಳಿಗೆ ಬಿಸಿಜಿ ಚುಚ್ಚುಮದ್ದು ನೀಡುತ್ತಾರೆ. ಅಮೇರಿಕಾ ಮತ್ತು ಇಂಗ್ಲೆಂಡ್ ನಂತಹ ಕಡಿಮೆ ಮಟ್ಟದಲ್ಲಿ ಟಿಬಿ ಹೊಂದಿರುವ ಕೆಲವು ದೇಶಗಳು ಎಲ್ಲಾ ಮಕ್ಕಳು ಲಸಿಕೆ ನೀಡುವುದಿಲ್ಲ, ಆದರೆ ನಿರ್ದಿಷ್ಟ ಅಪಾಯದಲ್ಲಿ ಇರುವ ರೋಗಿಗಳಿಗೆ ಈ ದೇಶಗಳಲ್ಲಿ ಮಾತ್ರ ಬಿಸಿಜಿ ನೀಡಲಾಗುತ್ತದೆ.
ಬಿ.ಸಿ.ಜಿ ಲಸಿಕೆ ಈಗಾಗಲೇ ಹೊಂದಿರುವ ಜನರಲ್ಲಿ ಟಿಬಿ ಚರ್ಮದ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಇರುತ್ತದೆ. ಇದರಿಂದ ವ್ಯಕ್ತಿಗೆ ಸುಪ್ತ ಟಿಬಿ ಇದೆಯೋ ಎಂಬುದನ್ನು ದೃಢಪಡಿಸಲು ಕಷ್ಟವಾಗುತ್ತದೆ. ಕೆಲವು ದೇಶಗಳಲ್ಲಿ ಲಸಿಕೆ ಬಳಸದೆ ಇರುವ ಕಾರಣಗಳಲ್ಲಿ ಇದು ಒಂದು. 6 ತಿಂಗಳುಗಳಿಗಿಂತಲೂ ಕಡಿಮೆ ವಯಸ್ಸಿನ ಶಿಶುಗಳು ಕ್ಷಯರೋಗ ಚರ್ಮ ಪರೀಕ್ಷೆಗೆ (ಮಂಟೌಕ್ಸ್ ಪರೀಕ್ಷೆ) ಬಿಸಿಜಿ ಲಸಿಕೆಗೆ ಮುನ್ನ ಒಳಗಾಗಬೇಕಿಲ್ಲ. ಆದರೆ 6 ತಿಂಗಳ ನಂತರ ಈ ಪರೀಕ್ಷೆಗೆ ಮಗುವನ್ನು ಒಳಪಡಿಸಬಹುದು. ಬಿ.ಸಿ.ಜಿ ಲಸಿಕೆಗೆ ಮುಂಚೆಯೇ ಚರ್ಮದ ಪರೀಕ್ಷೆಯನ್ನು ಹೆಚ್ಚಾಗಿ ನೀಡಲಾಗುತ್ತದೆ. ಚರ್ಮ ಪರೀಕ್ಷೆಗೆ ಸಕಾರಾತ್ಮಕ ಪರಿಣಾಮವಿದ್ದರೆ, ವ್ಯಕ್ತಿಯು ಈಗಾಗಲೇ ಟಿಬಿಗೆ ನಿರೋಧಕತೆಯನ್ನು ಹೊಂದಿದ್ದಾನೆ ಎಂದು ಸೂಚಿಸಿದರೆ, ಆಗ ಬಿಸಿಜಿ ಲಸಿಕೆ ನೀಡಲಾಗುವುದಿಲ್ಲ. ಈಗಾಗಲೇ ಕೆಲವು ರೋಗನಿರೋಧಕ ಹೊಂದಿರುವ ವ್ಯಕ್ತಿಗೆ ಬಿ.ಸಿ.ಜಿ ಲಸಿಕೆ ನೀಡುವಲ್ಲಿ ಯಾವುದೇ ಪ್ರಯೋಜನವಿಲ್ಲ ಮತ್ತು ಇದರಿಂದ ಅಹಿತಕರ ಅಡ್ಡ ಪರಿಣಾಮಗಳನ್ನು ಉಂಟಾಗಬಹುದು.
ಬಿಸಿಜಿ ಲಸಿಕೆ ಯಾವುದರಿಂದ ಮಾಡಲ್ಪಟ್ಟಿದೆ?
ಬಿಸಿಜಿ ಲಸಿಕೆ ಮೈಕೋಬ್ಯಾಕ್ಟೀರಿಯಮ್ ಬೋವಿಸ್ ಎಂಬ ಜೀವಂತ ಮತ್ತು ದುರ್ಬಲ ಬ್ಯಾಕ್ಟೀರಿಯವನ್ನು ಹೊಂದಿದೆ. ಇದು ಮಾನವರಲ್ಲಿ ಕ್ಷಯ/ಟಿಬಿ ಉಂಟು ಮಾಡುವ ಮೈಕೋಬ್ಯಾಕ್ಟೀರಿಯಂ ಬ್ಯಾಕ್ಟೀರಿಯಾ ಅಲ್ಲ.
ಲಸಿಕೆ ನೀಡಲ್ಪಟ್ಟ ನಂತರ:
- ಕೆಲವು ಸೆಕೆಂಡುಗಳವರೆಗೆ ಲಸಿಕೆ ಜಾಗದ ಚರ್ಮವನ್ನು ಉಜ್ಜಿರಿ.
- ಮಗು ಸ್ವಲ್ಪ ನೋವಲ್ಲಿರಬಹುದು. ಮಗುವನ್ನು ವಿಶ್ರಾಂತಿ ಮಾಡಲು ಬಿಡಿ.
- ಬಿಗಿಯಾದ ಉಡುಪುಗಳನ್ನು ಹಾಕಬೇಡಿ.
- ಸಾಮಾನ್ಯವಾಗಿ ಮಗುವನ್ನು ಸ್ತನ್ಯಪಾನ ಮಾಡಿಸಿ.
- ಜ್ವರ ಸಂದರ್ಭದಲ್ಲಿ ಜ್ವರ ನಿವಾರಣೆ ಅಥವಾ ನೋವು ನಿವಾರಿಸುವ ಔಷಧಿಗಾಗಿ ನಿಮ್ಮ ವೈದ್ಯರನ್ನು ಕೇಳಿಕೊಳ್ಳಿ