ತಾಯಿ ಪ್ರಸವದ ನೋವಿನಿಂದ ಇರುತ್ತಾಳೆ ಮತ್ತು ಪ್ರಸವದ ಪ್ರಕ್ರಿಯೆಯಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾಳೆ - ಸಾಮಾನ್ಯ ಡೆಲಿವರಿ ಅಥವಾ ಸಿಜೇರಿಯನ್ ಡೆಲಿವೆರಿ ಆಗಿರಲಿ ಆದರೆ ಸಾಧ್ಯವಾದಷ್ಟು ಬೇಗ ತಾಯಿಗೆ ಮಗುವನ್ನು ಸ್ತನ್ಯಪಾನ ಮಾಡಲು ಪ್ರೋತ್ಸಾಹಿಸಬೇಕು. ಇದು ಮಗುವಿನ ಜೊತೆಯ ಬಾಂಧವ್ಯ ಬೆಸೆಯಲು ಸಹಾಯ ಮಾಡುತ್ತದೆ ಮತ್ತು ಮಗುವಿನ ಚರ್ಮದೊಂದಿಗೆ ತಾಯಿಯ ಚರ್ಮದ ಸಂಪರ್ಕವನ್ನುಂಟು ಮಾಡುವದರಿಂದ ಮಗು ಸುರಕ್ಷಿತವಾಗಿರುತ್ತದೆ.
ಕೊಲೊಸ್ಟ್ರಮ್ ಎಂದು ಕರೆಯಲ್ಪಡುವ ಈ ಮೊದಲ ಹಾಲಿನಲ್ಲಿ ಪ್ರೋಟೀನ್ಗಳು, ವಿಟಮಿನ್ಗಳು ಮತ್ತು ಖನಿಜಗಳು ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ, ಮತ್ತು ಮಗುವಿನಲ್ಲಿ ಪ್ರತಿಕಾಯಗಳು (Antibodies) ಉತ್ಪಾದಿಸಲು ಸಹ ಉತ್ತೇಜಿಸುತ್ತದೆ. ಇದು ಮಗುವಿನ ಕರುಳಿನ ಒಳಭಾಗವನ್ನು ಪದರಾಗಿ ಆವರಿಸುತ್ತದೆ, ಅವನ / ಅವಳ ಅಪಕ್ವವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ರಕ್ಷಿಸುತ್ತದೆ ಮತ್ತು ಅಲರ್ಜಿಗಳ ವಿರುದ್ಧ ರಕ್ಷಿಸುತ್ತದೆ. ಇದು ಮಗುವಿನ ಮೊದಲ ಕರುಳಿನ ಚಲನೆಯನ್ನು ಉತ್ತೇಜಿಸಲು ಮತ್ತು ಕಾಮಾಲೆ ಅಪಾಯವನ್ನು ಕಡಿಮೆಗೊಳಿಸುತ್ತದೆ ಎಂದು ಭಾವಿಸಲಾಗಿದೆ. ಈ ಹಾಲು ಮೊದಲ ಕೆಲವೇ ದಿನಗಳು ಉತ್ಪತ್ತಿಯಾಗುತ್ತದೆ ತದನಂತರ ಮುಂದಿನ ಹಂತದ ಎದೆ ಹಾಲಿಗೆ ಪರಿವರ್ತನೆಯಾಗುತ್ತದೆ. ನಿಯಮಿತವಾಗಿ ಮಗು ಹಾಲನ್ನು ಕುಡಿಯುವದರಿಂದ ನಿಮ್ಮ ದೇಹವು ಹೆಚ್ಚು ಹಾಲು ಉತ್ಪಾದಿಸಲು ಸಹಾಯ ಮಾಡುತ್ತದೆ.
ಮಗುವಿಗೆ ಕೊಲಸ್ಟ್ರಮ ಹಾಲನ್ನು ಕೊಡಲು ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕೆ!