ಬೇಬಿ ಮಾನಿಟರ್ ನ ಪ್ರಾಥಮಿಕ ಉಪಯೋಗಗಳಲ್ಲಿ ಒಂದು ಶಿಶು ಎಚ್ಚರಗೊಳ್ಳುವಾಗ ಮಗುವಿನ ಆರೈಕೆ ಮಾಡುವವವರು ಮಗುವಿಂದ ದೂರ ಇದ್ದಾಗ ಮಗುವಿನ ಧ್ವನಿಯನ್ನು ಕೇಳಲು ಅವಕಾಶ ನೀಡುವುದು ಆಗಿದೆ. ಬೇಬಿ ಮಾನಿಟರ್ ಗಳನ್ನೂ ಸಾಮಾನ್ಯವಾಗಿ ಬಳಸಿದರೂ, ಈ ಮಾನಿಟರ್ ಗಳು SIDS (Sudden infant death syndrome: ಹಠಾತ್ ಶಿಶು ಮರಣ ಸಿಂಡ್ರೋಮ್, ಇದನ್ನು 'ಕಾಟ್ ಡೆತ್' ಅಥವಾ 'ಕ್ರಿಬ್ ಡೆತ್' ಎಂದೂ ಕರೆಯುತ್ತಾರೆ. ಇದು ಒಂದು ವರ್ಷದೊಳಗಿನ ಮಗುವಿನ ಹಠಾತ್ ವಿವರಿಸಲಾಗದ ಸಾವು) ಅನ್ನು ತಡೆಗಟ್ಟುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ, ಮತ್ತು ಅನೇಕ ವೈದ್ಯರು ಬೇಬಿ ಮಾನಿಟರ್ ಗಳು ಒಂದು ಸುಳ್ಳು ಭದ್ರತೆಯ ಭಾವನೆ ಉಂಟು ಮಾಡುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ನವಜಾತ ಶಿಶುಗಳು ಅಥವಾ ಚಿಕ್ಕ ಮಕ್ಕಳು ತಮ್ಮ ತೊಟ್ಟಿಲಲ್ಲಿ ಆಗಾಗ್ಗೆ ತಮ್ಮಷ್ಟಕ್ಕೆ ತಾವೇ ಮಾತನಾಡುತ್ತ ಇರುತ್ತವೆ. ಇದು ಅವರ ಭಾಷೆ ಕೌಶಲ್ಯಗಳನ್ನು ಅಭ್ಯಾಸ ಮಾಡುವ ಸಾಮಾನ್ಯ ಭಾಗವಾಗಿದೆ.
ಮೊದಲ ಬೇಬಿ ಮಾನಿಟರ್ 1937 ರ "ರೇಡಿಯೋ ನರ್ಸ್" ಆಗಿತ್ತು.
ತಾಯಿ ಆದ ಮೇಲೆ ನೀವು ಎರಡು ಜೀವ ಹೊಂದಿದ್ದೀರಾ ಎಂದೇ ಅನಿಸುವುದು ಆದರೆ ನಿಮ್ಮ ಮಗುವಿನ ಜೊತೆ ಸದಾ ಕಾಲ ಇರುವುದು ಕೊಂಚ ಕಷ್ಟವೇ. ಬಟ್ಟೆ ಒಗೆಯುವದು, ಮನೆಗೆ ಬರುವ ಅತಿಥಿಗಳು, ಬಾಗಿಲಲ್ಲಿ ನಿಂತಿರಿವ ತರಕಾರಿ ಬಂಡಿ, ನಿಮ್ಮ ಉಪಹಾರ, ಮೆಚ್ಚಿನ ಧಾರಾವಾಹಿ, ಮತ್ತೆ ದೂರವಾಣಿಯಲ್ಲಿ ಗೆಳತಿಯರೊಂದಿಗಿನ ಆ ಧೀರ್ಘ ಮಾತುಕತೆ ಇದೆಲ್ಲಾ ಇವಾಗ ಮೊದಲಿನ ತರಹ ಇರುವದು ಸಾಧ್ಯವಿಲ್ಲ. ಇಷ್ಟೆಲ್ಲಾ ಗೊಂದಲಗಳು ಇರುವಾಗ ನಿಮಗೆ ಖಂಡಿತ ಮಗುವಿನ ಆರೈಕೆ ಮಾಡಲು ಇನ್ನೊಬ್ಬರ ಸಹಾಯ ಬೇಕೇ ಬೇಕಾಗುತ್ತದೆ. ಅವಾಗ ನಿಮಗೆ ಬೇಬಿ ಮಾನಿಟರ್ ನ ಅಗತ್ಯ ತುಂಬಾ ಮುಖ್ಯವಾಗುತ್ತದೆ.
ಬೇಬಿ ಮೂವ್ ಮೆಂಟ್ ಮಾನಿಟರ್ ಗಳು ಸೆನ್ಸರ್ ಪ್ಯಾಡ್ಗಳೊಂದಿಗೆ ಬರುತ್ತವೆ. ಸೆನ್ಸರ್ ಪ್ಯಾಡ್ ಗಳನ್ನೂ ತೊಟ್ಟಿಲಿನ ಕೆಳಗಡೆ ಅಥವಾ ಮಗು ಮಲಗಿರುವ ಹಾಸಿಗೆಯ ಕೆಳಗಡೆ ಇರಿಸಲಾಗುತ್ತದೆ. ಈ ಪ್ಯಾಡ್ ಗಳು ಮಗುವಿನ ಚಲನೆ-ವಲನೆಗಳನ್ನು ಗುರುತಿಸುತ್ತದೆ. ಆಕಸ್ಮಾತ್, ೨೦ ನಿಮಿಷಗಳವರೆಗೆ ಮಗುವಿನ ಯಾವುದೇ ಚಲನೆ ಇಲ್ಲದಿದ್ದಲ್ಲಿ ಈ ಮಾನಿಟರ್ ಗಳು ಒಂದು ಅಲಾರ್ಮ್ ಧ್ವನಿಯನ್ನು ಕೂಗುತ್ತದೆ.
ಒಂದು ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ನಂತಹ ಕ್ಯಾಮರಾ-ಸಜ್ಜುಗೊಂಡ ಸಾಧನವನ್ನು ನಿಯಂತ್ರಣ ಮಾಡಲು ಬಳಕೆದಾರರಿಗೆ ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಗಳು ಅವಕಾಶ ನೀಡುತ್ತವೆ. ಇದಕ್ಕಾಗಿ ನೀವು ಮಗುವಿನ ಹತ್ತಿರ ಯಾವಾಗ್ಲೂ ಒಂದು ಸ್ಮಾರ್ಟ್ ಸಾಧನವನ್ನು ಇರಿಸಬೇಕಾಗುತ್ತದೆ.
ಪರ್ಯಾಯವಾಗಿ, Wi-Fi ಅಥವಾ Bluetooth ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ಲ್ ನಲ್ಲಿ ಮೀಸಲಾದ ಅಪ್ಲಿಕೇಶನ್ ಗೆ ಮಗುವಿನ ಕೋಣೆಯಲ್ಲಿನ ಕ್ಯಾಮರಾಗೆ ಲಿಂಕ್ ಮಾಡಬಹುದು. ಇದರರ್ಥ ಯಾವುದೇ ಸ್ಮಾರ್ಟ್ ಸಾಧನವನ್ನು ಮಗುವಿನ ಕೋಣೆಯಲ್ಲಿ ಬಿಡಬೇಕಾದ ಅಗತ್ಯವಿಲ್ಲ.