ತಪ್ಪಿಸಬೇಕಾದ ಕೆಲವು ಆಹಾರಗಳು ಈ ಕೆಳಕಂಡಂತಿವೆ:-
ಹಸು ಹಾಲು: ಶಿಶುಗಳ ಮೂತ್ರಪಿಂಡಗಳು ಈಗಲೂ ಹಸು ಹಾಲಿನಲ್ಲಿ ಇರುವ ಪ್ರೋಟೀನ್ ಗಳನ್ನೂ ನಿಭಾಯಿಸಲು ಸಜ್ಜುಗೊಂಡಿಲ್ಲ. ಇದು ಮಗುವಿನ ಮೂತ್ರಪಿಂಡಗಳ ಮೇಲೆ ಸಾಕಷ್ಟು ಒತ್ತಡವನ್ನು ಉಂಟುಮಾಡಬಹುದು. ಹೀಗಾಗಿ ಮಗುವಿನ ಮೂತ್ರಪಿಂಡಗಳು ಚೆನ್ನಾಗಿ ಅಭಿವೃದ್ಧಿ ಹೊಂದಿದ ತನಕ ಮತ್ತು ಹಾಲನ್ನು ಸಂಸ್ಕರಿಸಲು ಸಾಧ್ಯವಾಗುವ ತನಕ ಹಸುವಿನ ಹಾಲನ್ನು ಕೊಡದೆ ಇರುವುದು ಉತ್ತಮ. ಈ ಮಧ್ಯೆ, ಮಗುವನ್ನು ಸ್ತನ್ಯಪಾನ ಮಾಡುವುದು ಅತಿ ಉತ್ತಮ ಮತ್ತು ಸ್ತನ್ಯಪಾನವು ಸಾಧ್ಯವಿಲ್ಲದ ಸಂದರ್ಭಗಳಲ್ಲಿ, ನೀವು ಮಗುವಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಫಾರ್ಮುಲಾ ಹಾಲನ್ನು ನೀಡಬಹುದು.
ಜೇನು ತುಪ್ಪ: ಜೇನು ತುಪ್ಪ ಕ್ಲೊಸ್ಟ್ರಿಡಿಯಮ್ ಬೊಟುಲಿನಮ್ ಬ್ಯಾಕ್ಟೀರಿಯಾದ (Clostridium Botulinum Bacteria) ಬೀಜಕಗಳನ್ನು ಹೊಂದಿರಬಹುದು, ಅದು ಬೊಟುಲಿಸಮ್ (Botulism) ಅನ್ನು ಶಿಶುಗಳಲ್ಲಿ ಉಂಟುಮಾಡುತ್ತದೆ. ಬೊಟುಲಿಸಮ್ ಮಾರಣಾಂತಿಕ ಸ್ಥಿತಿಯಾಗಿದೆ ಮತ್ತು ನಿಮ್ಮ ಮಗುವನ್ನು ಈ ಸೋಂಕಿನ ಅಪಾಯಕ್ಕೆ ಇಳಿಸಲು ಯಾವುದೇ ತಂದೆ-ತಾಯಿ ಬಯಸುವುದಿಲ್ಲ. ಆದ್ದರಿಂದ ಮಗು ಅಂಬೆಗಾಲಿಡುವ ತನಕ ಜೇನು ತುಪ್ಪ ಕೊಡದೆ ಇರುವದು ಉತ್ತಮ.
ಬೀಜಗಳು: ಕಡಲೆಕಾಯಿ ಬೀಜಗಳು ಅಥವಾ ಇತರೆ ಬೀಜಗಳು (ಗೋಡಂಬಿ ಬೀಜಗಳು, ಬಾದಾಮಿ ಬೀಜಗಳು, ವಾಲ್ ನಟ್ಸ್ ಮತ್ತು ಇತರೆ) ಮಗುವಿನಲ್ಲಿ ಉಸಿರುಗಟ್ಟಿಸುವ ಅಪಾಯಗಳಿಗೆ ಕಾರಣವಾಗಬಹುದು ಆದ್ದರಿಂದ ಯಾವುದೇ ಬೀಜಗಳನ್ನು ನೀಡುವದನ್ನು ತಪ್ಪಿಸಬೇಕು.
ಮಾಂಸ ಮತ್ತು ಮಾಂಸದ ಉತ್ಪನ್ನಗಳು: ಹೆಚ್ಚಿನ ಪ್ರಮಾಣದಲ್ಲಿ ನೈಟ್ರೇಟ್ ಮತ್ತು ಸೋಡಿಯಂ ಅನ್ನು ಒಳಗೊಂಡಿರುವ ಕಾರಣ, ಮಾಂಸವನ್ನುನೀಡದೆ ಇರುವುದು ಉತ್ತಮವಾಗಿದೆ.
ಮೀನು: ಕೆಲವು ಮೀನುಗಳು ಪಾದರಸವನ್ನು ಹೊಂದಿರಬಹುದು ಆದ್ದರಿಂದ ಗರ್ಭಾವಸ್ಥೆಯಲ್ಲಿ ನೀವು ಮೀನನ್ನು ತಿನ್ನದೇ ಇರುವುದು ಒಳ್ಳೆಯದು ಮತ್ತು ನಿಮ್ಮ ನವಜಾತ ಶಿಶುವಿಗೂ ಒಂದು ವರ್ಷದವರೆಗೂ ತಿನ್ನಿಸದೆ ಇರುವುದು ಒಳ್ಳೆಯದು.
ಹಣ್ಣಿನ ರಸಗಳು: ಹಣ್ಣಿನ ರಸಗಳು ಸಾಮಾನ್ಯವಾಗಿ ಖಾಲಿ ಕ್ಯಾಲೊರಿಗಳಾಗಿವೆ. ಅವುಗಳನ್ನು ಸಾಮಾನ್ಯವಾಗಿ ಸಂಸ್ಕರಿಸಲಾಗುತ್ತದೆ ಮತ್ತು ಅದರಲ್ಲಿ ಫೈಬರ್ ಇಲ್ಲದಿರಬಹುದು. ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಗಳನ್ನು ಒಳಗೊಂಡಿರುವ ಕಾರಣದಿಂದ ಹಣ್ಣಿನ ರಸವನ್ನು ಕೊಡದಿರುವುದು ಒಳಿತು ಮತ್ತು ಹಣ್ಣಿನ ರಸವು ಮಗುವಿಗೆ ಹೊಟ್ಟೆ ತುಂಬಿಸಿದಂತೆ ಮಾಡುವದರಿಂದ ಇತರ ಆರೋಗ್ಯಕರ ಆಹಾರಗಳಿಗಾಗಿ ಸ್ಥಳಾವಕಾಶ ಮಾಡಿಕೊಡುವುದಿಲ್ಲ. ಹೆಚ್ಚು ಸಿಹಿ ಮತ್ತು ರಸವನ್ನು, ನಿರ್ದಿಷ್ಟವಾಗಿ ನಿದ್ರೆಗೆ ಮುಂಚಿತವಾಗಿ ನೀಡುವದರಿಂದ, ದಂತ ಕ್ಷೀಣತೆಗೆ ಕಾರಣವಾಗಬಹುದು.
ಸಿಹಿತಿಂಡಿಗಳು: ನಮ್ಮ ಭಾರತೀಯ ಸಿಹಿತಿಂಡಿಗಳು ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ತುಪ್ಪವನ್ನು ಹೊಂದಿರುತ್ತವೆ. ಸಾಂದರ್ಭಿಕವಾಗಿ ನಿಮ್ಮ ಮಗುವಿಗೆ ಕೆಲವು ಸಿಹಿತಿಂಡಿಗಳನ್ನು ತಿನ್ನಿಸುವುದು ಒಳ್ಳೆಯದು ಆದರೆ ಅವುಗಳನ್ನು ಅಭ್ಯಾಸವಾಗಿ ಮಾಡುವಲ್ಲಿ ಸಮಸ್ಯೆ ಇರಬಹುದು. ಶಿಶುಗಳು ಸಾಮಾನ್ಯವಾಗಿ ಸಿಹಿತಿಂಡಿಗಳನ್ನು ಇಷ್ಟಪಡುತ್ತಾರೆ ಹಾಗಂತ ಅವರಿಗೆ ಯಾವಾಗಲು ಸಿಹಿತಿಂಡಿ ತಿನ್ನಿಸಲು ಪ್ರೋತ್ಸಾಹಿಸುವದರಿಂದ ಅವರು ಜೀವನ ಪೂರ್ತಿ 'ಸ್ವೀಟ್ ಟೂತ್' (ಸಿಹಿ-ರುಚಿಯ ಆಹಾರಗಳಿಗೆ ಒಂದು ದೊಡ್ಡ ಇಚ್ಛೆ) ಆಗಬಹುದು.