ಕೆಲವು ತಾಯಂದಿರು ಇತರ ಸಾಮಾಜಿಕ ಜವಾಬ್ದಾರಿಗಳನ್ನು ಅಥವಾ ವೈದ್ಯಕೀಯ ಸ್ಥಿತಿಗಳನ್ನು ಹೊಂದಿರುವ ಕಾರಣದಿಂದಾಗಿ ಅವರು ಮಗುವಿಗೆ ಸ್ತನ್ಯಪಾನ ಮಾಡಲಾರರು. WHO ಮತ್ತು IAP (ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್) ಅಂತಹ ಅನೇಕ ಸಂಸ್ಥೆಗಳು ಸ್ತನ್ಯಪಾನವು ಮಗುವಿಗೆ ಉತ್ತಮ ಎಂದು ಶಿಫಾರಸು ಮಾಡುತ್ತದೆ, ಇದು ಸೋಂಕಿನಿಂದ ಮಗುವಿಗೆ ರಕ್ಷಣೆ ನೀಡುತ್ತದೆ, ಮಗುವಿನ ಪ್ರತಿರೋಧಕ ಶಕ್ತಿಯನ್ನು ಬೆಳೆಸುತ್ತದೆ ಮತ್ತು ಎದೆ ಹಾಲು ಸುಲಭವಾಗಿ ಜೀರ್ಣಗೊಳ್ಳುತ್ತದೆ. ಮೊದಲ ಆರು ತಿಂಗಳವರೆಗೆ ಶಿಶುಗಳಿಗೆ ವಿಶೇಷವಾಗಿ ಎದೆಹಾಲು ನೀಡಬೇಕು, ಅಂದರೆ, ಎದೆಹಾಲು ಹೊರೆತುಪಡಿಸಿ ಬೇರೆ ಯಾವ ದ್ರವ ಆಹಾರಗಳನ್ನೂ ನೀಡಬಾರದು. ತದನಂತರ 12 ತಿಂಗಳವರೆಗೂ ಅಥವಾ 12 ತಿಂಗಳುಗಳ ನಂತರ ಕೂಡ ನೀವು ಎದೆಹಾಲು ನೀಡುವುದು ಆದರೆ ಇದು ಮಗುವಿನ ಬೆಳವಣಿಗೆಗೆ ಲಾಭದಾರಕವಾಗಿದೆ.
ಸ್ತನ್ಯಪಾನ ಮಾಡದಿರಲು ನೀವು ಆಯ್ಕೆ ಮಾಡಿದ ಸಂದರ್ಭದಲ್ಲಿ, ಫಾರ್ಮುಲಾ ಹಾಲು ಉತ್ತಮ ಆಯ್ಕೆಯಾಗಿದೆ.
- ಫಾರ್ಮುಲಾ ಹಾಲನ್ನು ಉತ್ಪಾದನಾ ಸೌಲಭ್ಯಗಳಲ್ಲಿ (Producuction Facilities) ತಯಾರಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಕಬ್ಬಿಣಾಂಶ ಮತ್ತು ಕೆಲವು ವಿಟಮಿನ್ ಗಳಿಂದ ಸಮೃದ್ಧಗೊಳಿಸಲಾಗಿರುತ್ತದೆ. ಇದು ಮಗುವಿಗೆ ಬೇಕಾಗುವ ಎಲ್ಲಾ ಪೋಷಕಾಂಶಗಳನ್ನು ಕೂಡ ಒಳಗೊಂಡಿದೆ. ಫಾರ್ಮುಲಾ ಹಾಲನ್ನು ಎದೆ ಹಾಲು ರೀತಿಯಲ್ಲಿ ಶಿಶುಗಳಿಂದ ಸುಲಭವಾಗಿ ಜೀರ್ಣಿಸಲಾಗುವದಿಲ್ಲ, ಆದ್ದರಿಂದ ಕೆಲವು ಶಿಶುಗಳು ಮಲಬದ್ಧತೆಗೆ ಒಳಗಾಗುತ್ತವೆ.
- ಮಗುವಿಗೆ ಬಾಟಲ್ ಹಾಲುಣಿಸುವದರಿಂದ ಮನೆಯಲ್ಲಿ ಇರುವ ಎಲ್ಲರಿಗೂ ಮಗುವಿಗೆ ಹಾಲುಣಿಸುವ ಅವಕಾಶ ಸಿಗುತ್ತದೆ.
- ಕೆಲವು ತಾಯಂದಿರು ಮಗುವಿಗೆ ಸ್ತನ್ಯಪಾನ ಮಾಡದಿದ್ದರೆ ತನ್ನ ಮತ್ತು ಮಗುವಿನ ಮಧ್ಯೆ ಬಾಂಧವ್ಯ ಬೆಳೆಯುವುದಿಲ್ಲ ಎಂದು ಆತಂಕಕ್ಕೆ ಒಳಗಾಗುತ್ತಾರೆ. ಅದು ಸತ್ಯವಲ್ಲ - ನೀವು ಬಾಟಲ್ ಹಾಲು ನೀಡುತ್ತಿದ್ದರೂ ಕೂಡ ನಿಮ್ಮ ಮಗುವಿನೊಂದಿಗೆ ಒಳ್ಳೆ ಬಾಂಧವ್ಯ ಹೊಂದುತ್ತೀರಾ. ನಿಮ್ಮ ಪುಟ್ಟ ಮಗುವಿನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದನ್ನು ಮರೆಯಬೇಡಿ.
- ಫಾರ್ಮುಲಾ ಹಾಲು ಎದೆ ಹಾಲಿಗೆ ಹೋಲಿಸಿದರೆ ತುಂಬಾ ಕಡಿಮೆ ಜೀರ್ಣವಾಗುತ್ತದೆ. ಅದಕ್ಕಾಗಿ ಫಾರ್ಮುಲಾ ಹಾಲು ಕುಡಿಯುತ್ತಿರುವ ಮಕ್ಕಳು ಎದೆ ಹಾಲು ಕುಡಿಯುವ ಮಕ್ಕಳಿಗಿಂತ ಕಡಿಮೆ ಆಹಾರ ಸೇವಿಸಬೇಕಾಗುತ್ತದೆ.
- ಎದೆ ಹಾಲು ಸರಿಯಾದ ತಾಪಮಾನದಲ್ಲಿದ್ದು ಮತ್ತು ಯಾವಾಗಲು ಮಗುವಿಗೆ ಲಭ್ಯವಾಗಿರುತ್ತದೆ. ಫಾರ್ಮುಲಾ ಹಾಲನ್ನು ತಯಾರಿಸುವಾಗ ಬಾಟಲ್ ನ್ನು ಶುದ್ಧಗೊಳಿಸಿಬೇಕಾಗುತ್ತದೆ ಮತ್ತು ಫಾರ್ಮುಲವನ್ನು ಯಾವಾಗಲು ಸಂಗ್ರಹ ಮಾಡಿಟ್ಟರಬೇಕಾಗತ್ತದೆ ಆದರೆ ಎದೆ ಹಾಲು ನೀಡುವಾಗ ಇಷ್ಟೊಂದು ತಯಾರಿಗಳ ಅವಶ್ಯಕತೆ ಇರುವುದಿಲ್ಲ. ನಿಮಗೆ ಮಗುವಿಗೆ ಹಾಲುಣಿಸಲು, ಮಲಗಲು ಅಥವಾ ಕುಳಿತುಕೊಳ್ಳಲು ಸ್ವಲ್ಪ ಜಾಗವಿದ್ದರೆ ಸಾಕು.
- ಫಾರ್ಮುಲಾ ಸ್ವಲ್ಪ ದುಬಾರಿಯಾಗಿದೆ.
ಸ್ತನ್ಯಪಾನದ ಬಾಗೆ ನಾನು ಈ ಬ್ಲಾಗ್ ನಲ್ಲಿ ಹೆಚ್ಚಿನ ವಿವರಗಳನ್ನು ಬರೆದಿದ್ದೇನೆ.